Breaking News
Home / Breaking News / ಕನ್ನಡಿಗರ ಕನಸು ನುಚ್ಚು ನೂರು ಪಾಲಿಕೆಯಲ್ಲಿ ಮತ್ತೇ ಎಂಈಎಸ್ ಕಾರ್ಬಾರು..!!!

ಕನ್ನಡಿಗರ ಕನಸು ನುಚ್ಚು ನೂರು ಪಾಲಿಕೆಯಲ್ಲಿ ಮತ್ತೇ ಎಂಈಎಸ್ ಕಾರ್ಬಾರು..!!!

ಬೆಳಗಾವಿ- ಹಲವಾರು ದಿನಗಳಿಂದ ಅತ್ಯಂತ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆಯಲ್ಲಿ ಕನ್ನಡಿಗರು ಮೇಯರ್ ಆಗುವ ಕನಸು ನುಚ್ಚು ನೂರಾಗಿದ್ದು ಎಂಈಎಸ್ ಅಭ್ಯರ್ಥಿ ಸಂಜೋತಾ ಬಾಂಧೇಕರ ಮೇಯರ್ ಆಗಿ  ಉಪ ಮೇಯರ್ ಆಗಿ ಎಈಎಸ್ ನ ನಾಗೇಶ ಮಂಡೋಳ್ಕರ್ ಆಯ್ಕೆಯಾಗಿದ್ದಾರೆ

 

ಎಂಈಎಸ್ ಗುಂಪಿನಿಂದ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ,ಮೀನಾಕ್ಷಿ ಚಿಗರೆ ಮತ್ತು ಮಧುಶ್ರೀ ಪೂಜಾರಿ ನಾಮತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿ ಎಂಈಎಸ್ ನಿಂದ ಉಪ ಮೇಯರ್ ಸ್ಥಾನಕ್ಕೆ ನಾಗೇಶ ಮಂಡೋಳ್ಕೆರ್ ಮತ್ತು ಬಾಂಧುರ್ಗೆ ನಾಮಪತ್ರ ಸಲ್ಲಿಸಿದ್ದರು

ಇತ್ತ ಕನ್ನಡ ಗುಂಪಿನಿಂದ ಜಯಶ್ರೀ ಮಾಳಗಿ ಮತ್ತು ಪುಷ್ಪಾ ಪರ್ವತರಾವ ಅವರು ನಾಮಪತ್ರ ಸಲ್ಲಿಸಿದ್ದಾರೆ ಉಪ ಮೇಯರ್ ಸ್ಥಾನಕ್ಕೆ ಮುಜಮ್ಮಿಲ್ ಡೋಣಿ ಮತ್ತು ಫಯೀಮ ನಾಯಕವಾಡಿ ಅವರು ನಾಮಪತ್ರ ಸಲ್ಲಿಸಿದ್ದರು

ಹತ್ತು ನಿಮಿಷ ಮುಂದೂಡಿಕೆ
ಮಧ್ಯಾಹ್ನ ಒಂದು ಘಂಟೆಗೆ ಸರಿಯಾಗಿ ಚುನಾವಣಾ ಅಧಿಕಾರಿಯಾದ ಪ್ರಾದೇಶಿಕ ಆಯುಕ್ತ ಎನ್ ಜಯರಾಂ ಅವರು ಕೌನ್ಸೀಲ್ ಹಾಲ್ ಗೆ ಆಗಮಿಸಿದರು ಆದರೆ ಕೋರಂ ಭರ್ತಿಯಾಗದ ಕಾರಣ ಮತದಾನ ಪ್ರಕ್ರಿಯೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು

ನಂತರ ಸಭೆಯ ಆರಂಭದಲ್ಲಿ ಚುನಾವಣಾ ಅಧಿಕಾರಿ ಜಯರಾಂ ಅವರು ನಾಮಪತ್ರಗಳ ಪರಶೀಲನೆ ನಡೆಸಿ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ಘೋಷಿಸಿದರು

ನಾಮಪತ್ರ ವಾಪಸ್ ವಾಪಸ್ ಪಡೆಯಲು ಹತ್ತು ನಿಮಿಷ ಕಾಲಾವಕಾಶ ನೀಡಲಾಗಿತ್ತು ಕೊನೆಯ ಘಳಿಗೆಯಲ್ಲಿ ಎಂಈಎಸ್ ನ ಮಧುಶ್ರೀ ಪೂಜಾರಿ ಮತ್ತು ಮೀನಾಕ್ಷಿ ಚಿಗರೆ ಅವರು ನಾಮಪತ್ರವನ್ನು ವಾಪಸ್ ಪಡೆದರು

ಕಣದಲ್ಲಿ ಸಂಜೋತಾ ಬಾಂಧೇಕರ ಜಯಶ್ರೀ ಮಾಳಗಿ ಮತ್ತು ಪುಷ್ಪಾ ಪರ್ವತರಾವ ಅವರು ಕಣದಲ್ಲಿ ಉಳಿದುಕೊಂಡರು

ಎಂಈಎಸ್ ನ ಸಂಜೋತಾ ಬಾಂಧೇಕರ ಅವರ ಪರವಾಗಿ ೩೨ ಮತಗಳು ಚಲಾವಣೆಯಾಗಿ ಸಂಜೋತಾ ಬಾಂಧೇಕರ ಅವರು ಮೇಯರ್ ಸ್ಥಾನಕ್ಕೆ ಆಯ್ಕೆಯಾದರು ಜಯಶ್ರೀ ಮಾಳಗಿ ಅವರ ಪರವಾಗಿ ಕೇವಲ ೧೭ ಮತಗಳು ಚಲಾವಣೆಯಾಗಿ ಜಯಶ್ರೀ ಮಾಳಗಿ ಮೇಯರ್ ಆಗುವ ಕನಸು ಭಗ್ನವಾಯಿತು

ಪುಷ್ಪಾ ಪರ್ವತರಾವ ಅವರ ಪರವಾಗಿ ೧೦ ಮತಗಳು ಚಲಾವಣೆಯಾದವು

ಶಾಸಕ ಸತೀಶ ಜಾರಕಿಹೊಳಿ ಮತ್ತು ಫಿರೋಜ್ ಸೇಠ ಅವರು ಪುಷ್ಪಾ ಪರ್ವತರಾವ ಅವರ ಪರವಾಗಿ ಮತ ಚಲಾಯಿಸಿದರೆ ಸಂಸದ ಪ್ರಕಾಶ ಹುಕ್ಕೇರಿ ಯಾರಿಗೂ ಮತ ಚಲಾಯಿಸದೇ ತಟಸ್ಥವಾಗಿದ್ದರು

ಉಪ ಮೇಯರ್ ಸ್ಥಾನಕ್ಕೆ ಮತದಾನ ನಡೆಯುತ್ತದೆ ನಾಗೇಶ ಮಂಡೋಳ್ಕರ್ ಅವರು32 ಮತಗಳನ್ನು ಪಡೆದು ಉಪ ಮಹಾಪೌರರಾಗಿ ಆಯ್ಕೆಯಾದರು

ಚುನಾಯಿತ ಸದಸ್ಯರು ೫೭ಚುನಾಯಿತ ಸದಸ್ಯರು ನಾಲ್ಕು ಜನ ಪದನಿಮಿತ್ತ ಸದಸ್ಯರು ಭಾಗವಹಿಸಿದ್ದರು ಆರವತ್ತು ಒಟ್ಟು ೫೯ಜನ ಸದಸ್ಯರು ಮತ ಚಲಾಯಿಸಿದರು ಒಬ್ಬರು ತಟಸ್ಥವಾಗಿದ್ದರು

ಬಿಜೆಪಿ ಶಾಸಕ,ಸಂಸದರ ಗೈರು

ಪಾಲಿಕೆಯ ಮೇಯರ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಭಾಗವಹಿಸಿ ಎಲ್ಲರ ಗಮನ ಸೆಳೆದರು  ಆದರೆ ಯಾರ ಪರವಾಗಿಯೂ ಮತ ಚಲಾಯಿಸದೇ ತಟಸ್ದ ವಾಗಿದ್ದರು ಸುರೇಶ ಅಂಗಡಿ ಶಾಸಕ ಸಂಜಯ ಪಾಟೀಲ  ಅವರು ಗೈರಾಗಿದ್ದರು

ಸತೀಶ ಜಾರಕಿಹೊಳಿ ಠಿಕಾನಿ
ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಮೇಯೆ್ ಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಾಲಿಕೆ ಕಚೇರಿಗೆ ಆಗಮಿಸಿದರು ಸಂಬಾಜಿ ಪಾಟೀಲರನ್ನು ಭೇಟಿಯಾದರು ಶಾಸಕ ಫಿರೋಜ್ ಸೇಠ ಜೊತೆ ಸೇರಿಕೊಂಡು ಎರಡು ಘಂಟೆಗಳ ಕಾಲ ನಗರ ಸೇವಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು

ಮೂಡದ ಒಮ್ಮತ

ಕನ್ನಡ ಗುಂಪಿನಲ್ಲಿ ಒಮ್ಮತ ಮೂಡಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾದರು ಕನ್ನಡ ಗುಂಪಿನಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ದಿಸಿದ್ದರಿಂದ ಆರಂಭದಲ್ಲಿಯೇ ಕನ್ನಡಿಗರಿಗೆ ಸೋಲಾಯಿತು

Check Also

ಧಾರವಾಡದಿಂದ, ಪ್ರಲ್ಹಾದ್ ಜೋಶಿ ಬದಲಾವಣೆಗೆ ಮಠಾಧೀಶರ ಪಟ್ಟು…!!

ಧಾರವಾಡ ‌ಲೋಕಸಭೆ ಅಭ್ಯರ್ಥಿ ಪ್ರಹ್ಲಾದ್ ‌ಜೋಶಿ ಬದಲಾವಣೆಗೆ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹ: ಮಾ.31 ರ ಗಡುವು ನೀಡಿದ ಮಠಾಧೀಶರು… ಹುಬ್ಬಳ್ಳಿ- …

Leave a Reply

Your email address will not be published. Required fields are marked *