ಬೆಳಗಾವಿ- ಹಲವಾರು ದಿನಗಳಿಂದ ಅತ್ಯಂತ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯ ವಾಗಿದೆ
ಎಂಈಎಸ್ ಗುಂಪಿನಿಂದ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ,ಮೀನಾಕ್ಷಿ ಚಿಗರೆ ಮತ್ತು ಮಧುಶ್ರೀ ಪೂಜಾರಿ ನಾಮತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂಈಎಸ್ ನಿಂದ ಉಪ ಮೇಯರ್ ಸ್ಥಾನಕ್ಕೆ ನಾಗೇಶ ಮಂಡೋಳ್ಕೆರ್ ಮತ್ತು ಬಾಂಧುರ್ಗೆ ನಾಮಪತ್ರ ಸಲ್ಲಿಸಿದ್ದಾರೆ
ಇತ್ತ ಕನ್ನಡ ಗುಂಪಿನಿಂದ ಜಯಶ್ರೀ ಮಾಳಗಿ ಮತ್ತು ಪುಷ್ಪಾ ಪರ್ವತರಾವ ಅವರು ನಾಮಪತ್ರ ಸಲ್ಲಿಸಿದ್ದಾರೆ ಉಪ ಮೇಯರ್ ಸ್ಥಾನಕ್ಕೆ ಮುಜಮ್ಮಿಲ್ ಡೋಣಿ ಮತ್ತು ಫಯೀಮ ನಾಯಕವಾಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ
ಮಧ್ಯಾಹ್ನ ಒಂದು ಘಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ