ಬೆಳಗಾವಿ ಗಡಿಯಲ್ಲಿ ಸದ್ದು ಮಾಡಿದ ಬುಲ್ಡೇಜರ್…..!!
ಬೆಳಗಾವಿ-ಬೆಳಗಾವಿ ಗಡಿಯಲ್ಲಿ ಕನ್ನಡದ ಹುಡುಗರು ಈಗ ಜಾಗೃತರಾಗಿದ್ದಾರೆ,ಕನ್ನಡದ ನೆಲ,ಜಲ,ಭಾಷೆ,ಮತ್ತು ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಆದಾಗ ಕನ್ನಡದ ಸೇನಾನಿಗಳು ಸಿಡಿದೆದ್ದು ಕನ್ನಡದ ಹಿತ ಕಾಯುತ್ತಿದ್ದಾರೆ ಅನ್ನೋದಕ್ಕೆ ಬೆಳಗಾವಿಯ ಗಡಿಭಾಗದಲ್ಲಿರುವ ಸಂಕೇಶ್ವರದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಸಂಕೇಶ್ವರದಲ್ಲಿ ಪೂನಾ- ಬೆಂಗಳೂರು ಹೈವೇ ಪಕ್ಕದ ಗಡಿಂಗ್ಲಜ್- ಸಂಕೇಶ್ವರ ರಸ್ತೆಯ ಸೇತುವೆ ಪಕ್ಕದಲ್ಲಿ,ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಕರ್ನಾಟಕ ಗಡಿಯ ಮೂರು ಕಿ.ಮೀ ಒಳಗೆ,ಕನ್ನಡದ ನೆಲದಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಶಾಸನ ಎಂಬ ಫಲಕ ಹಾಕಿದ್ದರು. ಈ ವಿಚಾರವನ್ನು ಪೋಲೀಸ್ ಇಲಾಖೆಯ ಗಮನಕ್ಕೆ ತಂದ ಸಂಕೇಶ್ವರದ ಹುಡುಗರು ಬುಲ್ಡೇಜರ್ ಹಚ್ಚಿ ಮಹಾರಾಷ್ಟ್ರ ಸರ್ಕಾರದ ನಿಲ್ಲಿಸಿದ ಫಲಕವನ್ನು ಕಿತ್ತೆಸೆದಿದ್ದಾರೆ.
ಗಡಿ ಭಾಗದ ಸಂಕೇಶ್ವರ ಮತ್ತು ನಿಪ್ಪಾಣಿಯಲ್ಲಿ ಕನ್ನಡದ ಜಾಗೃತಿಯಾಗುತ್ತಿದೆ.ಇಲ್ಲಿಯ ಹುಡುಗರು ಕನ್ನಡದ ವಿಚಾರದಲ್ಲಿ ತಕ್ಷಣ ಸ್ಪಂದಿಸುತ್ತಿದ್ದು ಕನ್ನಡದ ಹಿತಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು.ಹಿರಿಯ ಕನ್ನಡಪರ ಹೋರಾಟಗಾರ ದಿವಂಗತ ಪಾಟೀಲ ಪುಟ್ಟಪ್ಪ ನವರ ಆಶಯದಂತೆ ನಿಪ್ಪಾಣಿ ಜಿಲ್ಲೆ ಆಗಬೇಕಿದೆ.ಮಹಾರಾಷ್ಟ್ದದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ಜಿಲ್ಲೆಯಾದಲ್ಲಿ ಕರ್ನಾಟಕದ ಗಡಿ ಇನ್ನಷ್ಟು ಗಟ್ಟಿಯಾಗುವದರಲ್ಲಿ ಸಂಶಯವೇ ಇಲ್ಲ.
ಜೈ- ಕರ್ನಾಟಕ…
ಜೈ- ಭುವನೇಶ್ವರಿ…