ಬೆಳಗಾವಿ – ಗಡಿ ಭಾಗದ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿರುವ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.
ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ. ಎಲ್ ಮಂಜುನಾಥ ಅವರಿಗೆ ಈ ಪತ್ರವನ್ನು ಸಮರ್ಪಿಸಿದ್ದಾರೆ.ಆಯೋಗದ ಅದ್ಯಕ್ಷರು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕನ್ನಡ ಸಂಘಟನೆಗಳು, ಮತ್ತು ಗಡಿಭಾಗದ ಬುದ್ಧಿಜೀವಿಗಳ ಜೊತೆ ಸಭೆ ನಡೆಸುವ ಮೊದಲು ಆಯೋಗದ ಅದ್ಯಕ್ಷರನ್ನು ಭೇಟಿಯಾದ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಎಂಈಎಸ್ ಸಂಘಟನೆಯನ್ನು ನಿಷೇಧಿಸಬೇಕು,ಜೊತೆಗೆ ಗಡಿ ಸಂರಕ್ಷಣಾ ಆಯೋಗದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ