Breaking News

Tag Archives: Mes belagavi

ಮರಾಠಿ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ನೋಟೀಸ್ ..

. ಬೆಳಗಾವಿ ಸಮೀಪದ ಕುದ್ರೇಮನಿ ಗ್ರಾಮದಲ್ಲಿ ಇತ್ತೀಚಿಗೆ ಮರಾಠಿ ಸಾಹಿತ್ಯ ಸಮ್ಮೇಳನ ನಡೆದಿತ್ತು .ಈ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಯೋಜಕರಿಗೆ ನಗರ ಪೋಲೀಸ್ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ . 50 ಸಾವಿರ ರೂ ಮುಚ್ಚಳಿಕೆ ಬರೆದು ಇಬ್ಬರಿಂದ ಜಾಮೀನು ಪಡೆಯುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.

Read More »

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!!

ಒಂದೇ ಕಲ್ಲಿನಿಂದ ಜೋಡಿ ಹಕ್ಕಿ ಹೊಡೆದ ಸವದಿ ಸಾಹುಕಾರ್….!!! ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜಕೀಯವಾಗಿ ,ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ,ಜಿಲ್ಲೆಯ ನಾಯಕರು ಪರಸ್ಪರ ಕಾಲೆಳೆದರೂ ಕುಸ್ತಿ ಗೆದ್ದ ಕೀರ್ತಿ,ಮಾತ್ರ ಬೆಳಗಾವಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರದ ರಚನೆಯಲ್ಲಿ ಅತೃಪ್ತ ಶಾಸಕರ ಸರ್ದಾರನಾಗಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಖ್ಯ ಪಾತ್ರ ನಿಭಾಯಿಸಿ,ಹೊಸ ಸರ್ಕಾರದ ರಚನೆಯ ರೂವಾರಿಯಾದರು,ಈಗ ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ,ರಾಜ್ಯದ ಉಪ ಮುಖ್ಯಮಂತ್ರಿಯಾದರು ಅಥಣಿ ಕ್ಷೇತ್ರದಿಂದ …

Read More »

ಎಂ ಈ ಎಸ್ ನಿಷೇಧಿಸಲು ಬೆಳಗಾವಿಯಲ್ಲಿ ರಕ್ತ ಪತ್ರ….

ಬೆಳಗಾವಿ – ಗಡಿ ಭಾಗದ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿರುವ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ. ಎಲ್  ಮಂಜುನಾಥ ಅವರಿಗೆ ಈ ಪತ್ರವನ್ನು ಸಮರ್ಪಿಸಿದ್ದಾರೆ.ಆಯೋಗದ ಅದ್ಯಕ್ಷರು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕನ್ನಡ ಸಂಘಟನೆಗಳು, ಮತ್ತು ಗಡಿಭಾಗದ ಬುದ್ಧಿಜೀವಿಗಳ …

Read More »

ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಂತ್ರಿ ಅರೆಸ್ಟ…

ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಂತ್ರಿ ಅರೆಸ್ಟ… ಬೆಳಗಾವಿ – ಬೆಳಗಾವಿಯಲ್ಲಿ ಎಂಈಎಸ್ ಆಯೋಜಿಸಿದ್ದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಹೆಡ್ರಾವಕರ ಅವರನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಹುತಾತ್ಮ ಚೌಕ್ ಬಳಿ ಹೆಡ್ರಾವಕರ ಆಗಮಿಸುತ್ತಿದ್ದಂತೆಯೇ ಬೆಳಗಾವಿ ಮಹಾರಾಷ್ಟ್ರದ ಸಚಿವರನ್ನು ಅರೆಸ್ಟ ಮಾಡಿದ್ದಾರೆ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ, ಬರುತ್ತಿದ್ದಾರೆ ಎಂಬ ಮಾಹಿತಿ ಬೆಳಗಾವಿ ಪೋಲೀಸರಿಗೆ ಸಿಕ್ಕಿದ್ದು ಪೋಲೀಸರು ನಗರದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ ಎಂಇಎಸ್ ಹುತಾತ್ಮ ದಿನಾಚರಣೆ …

Read More »