Breaking News

ಖಾತೆ ಬಂದ್ ಆದ್ರೂ ಕ್ಯಾತೆ ನಿಂತಿಲ್ಲ…..!!!

ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತು ಗಡಿಭಾಗದ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಸಂಪೂರ್ಣವಾಗಿ ಕಂಗಾಲಾಗಿರುವ ನಾಡವಿರೋಧಿ ಎಂಇಎಸ್ ನಾಯಕರು ಈಗ ಬೆಳಗಾವಿಯ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಭಾಷಾ ವೈಷಮ್ಯಮ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ.

ಬೆಳಗಾವಿಯ ಗಣೇಶ ವಿಸರ್ಜನಾ ವೇದಿಕೆಯ ಮೇಲೆ ಮರಾಠಿ ಬ್ಯಾನರ್ ಹಾಕಿಲ್ಲ ಎಂತು ಕ್ಯಾತೆ ತೆಗೆದು ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಘೇರಾವ್ ಹಾಕಲು ಹೋಗಿ ಮುಖಭಂಗಕ್ಕೊಳಗಾದ ಎಂಇಎಸ್ ನಾಯಕರು ಹತಾಶರಾಗಿ ಈಗ ಲಕ್ಷ್ಮೀ ನಿಪ್ಪಾಣಿಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿ ಮರಾಠಿ ಭಾಷಿಕರನ್ನು ಕೆರಳಿಸುತ್ತಿದ್ದಾರೆ‌.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸೋಲಿಗೆ ಕಾರಣವಾದ ರಾಷ್ಟ್ರೀಯ ಪಕ್ಷಗಳನ್ನು ನಂಬಬೇಡಿ,ಇದರ ಪರಿಣಾಮ ಇವತ್ತು ಗೊತ್ತಾಗುವದಿಲ್ಲ,ಮುಂದಿನ ದಿನಗಳಲ್ಲಿ ಇದರ ಪರಣಾಮ ನಿಮಗೆ ಗೊತ್ತಾಗುತ್ತದೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಎಂಇಎಸ್ ನಾಯಕರು ರಾಷ್ಟ್ರೀಯ ಪಕ್ಷಗಳ ಬಗ್ಗೆ ಮರಾಠಿ ಭಾಷಿಕರಲ್ಲಿ ದ್ವೇಷ ಹುಟ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಎಂಈಎಸ್ ವಿರುದ್ಧ ಕ್ರಮ ಜರುಗಿಸುವಂತೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಮಹಾನಗರ ಪಾಲಿಕೆ ನಿರ್ಮಿಸಿದ ವೇದಿಕೆಯ ಮೇಲೆ ಕನ್ನಡ ಫಲಕ ಹಾಕಿದ ಮಹಿಳಾ ಅಧಿಕಾರಿಗೆ ಘೇರಾವ್ ಹಾಕಿದ ಎಂಇಎಸ್ ಪುಂಡರ ವಿರುದ್ಧ ಪೋಲೀಸರು ಕೇಸ್ ಹಾಕಿ ಅವರನ್ನು ಕೂಡಲೇ ಬಂಧಿಸಿ,ಎಂಇಎಸ್ ಕಿತಾಪತಿಗೆ ಬ್ರೇಕ್ ಹಾಕುವಂತೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *