Breaking News
Home / Breaking News / ಸಿಇಟಿ , ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್

ಸಿಇಟಿ , ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್

ಬೆಳಗಾವಿ-ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್ ಪಡೆದಿದ್ದಾನೆ.

ಸಿಇಟಿ ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಗೆ ಐದನೇ ರ‌್ಯಾಂಕ್ ಲಭಿಸಿದೆ. ಬೆಳಗಾವಿಯ ಮಹ್ಮದ್ ಕೈಫ್ ಮುಲ್ಲಾ ಐದನೇಯ ರ‌್ಯಾಂಕ್ ಪಡೆದಿದ್ದಾನೆ.

ಏರ್‌ಪೋರ್ಸ್ ತರಬೇತಿ ಕೇಂದ್ರದಲ್ಲಿ ಮಹ್ಮದ ಕೈಫ್ ತಂದೆ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹ್ಮದ್ ಕೈಫ್ ತಂದೆ ಕುತ್ಬುದ್ದೀನ್ ಮುಲ್ಲಾ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ತರಬೇತಿ ಕೇಂದ್ರದಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಯೋಗ, ನ್ಯಾಚುರೋಪಥಿ, ಪಶು ವೈದ್ಯಕೀಯ ವಿಭಾಗದಲ್ಲಿ ಐದನೇ ರ‌್ಯಾಂಕ್ ಪಡೆದ ಮಹ್ಮದ್ ಕೈಫ್,ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿ ಆಗಿದ್ದಾನೆ.ಬಿ ಫಾರ್ಮಾ, ಫಾರ್ಮಾ ಡಿ ವಿಭಾಗದಲ್ಲಿ 8ನೇ ರ‌್ಯಾಂಕ್ ಕೃಷಿ ವಿಭಾಗದಲ್ಲಿ 15ನೇ ರ‌್ಯಾಂಕ್ ಪಡೆದ ಮಹ್ಮದ್ ಕೈಫ್ ಮುಲ್ಲಾ,ಇಂಜಿನಿಯರಿಂಗ್ ವಿಭಾಗದಲ್ಲಿ 119ನೇ ರ‌್ಯಾಂಕ್ ಪಡೆದಿದ್ದಾನೆ. ಬೆಳಗಾವಿಯ ಮಹ್ಮದ್ ಕೈಫ್ ಮುಲ್ಲಾ.

ಸಿಇಟಿ ಪರೀಕ್ಷೆಯಲ್ಲಿ ಒಟ್ಟಾರೆ 240ಕ್ಕೆ 215 ಅಂಕ ಪಡೆದಿರುವ ಮಹ್ಮದ್ ಕೈಫ್,ಭೌತಶಾಸ್ತ್ರ 60 ರ ಪೈಕಿ 57, ರಸಾಯನಶಾಸ್ತ್ರ 60ರ ಪೈಕಿ 57 ಅಂಕ, ಗಣಿತ 60ರ ಪೈಕಿ 43, ಜೀವಶಾಸ್ತ್ರ 60 ರ ಪೈಕಿ 58 ಅಂಕ ಪಡೆದಿರುವ ಮಹ್ಮದ್ ಕೈಫ್ ಸಾಧನೆ ಮಾಡಿದ್ದಾನೆ.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *