Breaking News

ಕರ್ನಾಟಕ-ಮಹಾರಾಷ್ಟ್ರ ನಡುವೆ ಐತಿಹಾಸಿಕ ಸಭೆ….

ಬೆಳಗಾವಿ- ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಘರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡು ರಾಜ್ಯಗಳ ನಡುವೆ ಮಹತ್ವದ ಸಭೆ ನಡೆಯುತ್ತಿದೆ ಈ ಸಭೆಯಲ್ಲಿ ಎರಡು ರಾಜ್ಯಗಳ ರಾಜ್ಯಪಾಲರು ಭಾಗಿಯಾಗುತ್ತಿರುವದರಿಂದ ಈ ಸಭೆ ಈಗ ರಾಷ್ಟ್ರದ ಗಮನ ಸೆಳೆದಿದೆ.

ಲಕ್ಷಾಂತರ ಕನ್ನಡಿಗರು ಸೇರಿ ರಾಜ್ಯೋತ್ಸವ ಆಚರಿಸಿ ಬೆಳಗಾವಿ ನಮ್ಮ ನೆಲ ಎಂದು ರಾಷ್ಟ್ರಕ್ಕೆ ಸಂದೇಶ ಸಾರಿದ ಬೆನ್ನಲ್ಲಿಯೇ ನವೆಂಬರ್ 4 ರಂದು ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿರುವ ಛತ್ರಪತಿ ಶಿವಾಜಿ ಯುನಿವರ್ಸಿಟಿಯಲ್ಲಿ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವೆ ಜಂಟಿ ಸಭೆ ನಡೆಯುತ್ತಿದೆ.

ಈ ವಿಚಾರದ ಕುರಿತು ಮಹಾರಾಷ್ಟ್ರದ ಮಾದ್ಯಮಗಳು ವರದಿ ಮಾಡಿವೆ,ನವೆಂಬರ್ 4 ರಂದು ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಉಭಯ ರಾಜ್ಯಗಳ ರಾಜ್ಯಪಾಲರು, ಎರಡು ರಾಜ್ಯಗಳ ಗಡಿ ಜಿಲ್ಲೆಗಳ ಪೋಲೀಸ್ ಅಧಿಕಾರಿಗಳು,ಜಿಲ್ಲಾಧಿಕಾರಿಗಳು ಭಾಗವಹಿಸುತ್ತಿರುವದು ಸಭೆಯ ವಿಶೇಷತೆಯಾಗಿದೆ.ಈ ಸಭೆಯಲ್ಲಿ ಆಲಮಟ್ಟಿ ಜಲಾಶಯದ ಅಣೆಕಟ್ಟಿನ ಎತ್ತರ ಹೆಚ್ಚಿಸುವದು,ಹಾಗೂ ಗಡಿ ವಿವಾದದ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಉಭಯ ರಾಜ್ಯಗಳ ರಾಜ್ಯಪಾಲರು ಎರಡು ರಾಜ್ಯಗಳ ಗಡಿ ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿ ಈ ಸಭೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಅಭಿಪ್ರಾಯ ಆಲಿಸಿ, ಅಲಮಟ್ಟಿ ಜಲಾಶಯದ ಎತ್ತರ ಹೆಚ್ವಿಸುವದು ಹಾಗು ಗಡಿ ವಿವಾದದಗಳ ಕುರಿತು ಸಮಗ್ರ ಮಾಹಿತಿ ಪಡೆದು ಎರಡು ರಾಜ್ಯಗಳ ರಾಜ್ಯಪಾಲರು ಸೇರಿ,ಕೇಂದ್ರ ಸರ್ಕಾರಕ್ಕೆ ಜಂಟಿಯಾಗಿ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಈ ಸಭೆಯ ಕುರಿತು ಮಹಾರಾಷ್ಟ್ರದ ಮಾದ್ಯಮಗಳು ವರದಿ ಮಾಡಿದ್ದು ಉಭಯ ರಾಜ್ಯಗಳ ಸರ್ಕಾರಗಳು ಸಭೆಯ ಕುರಿತು ಇನ್ನುವರೆಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ.

ನವೆಂಬರ್ 4 ರಂದು ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ನಡೆಯುವ ಸಭೆ ಅತ್ಯಂತ ಮಹತ್ವದ ಸಭೆಯಾಗಿದ್ದು ಈ ಸಭೆ ಉಭಯ ರಾಜ್ಯಗಳ ಗಮನ ಸೆಳೆಯಲಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *