ಬೆಳಗಾವಿ-ಕಳೆದ ಆರು ದಶಕಕಗಳಿಂದ ಸಂಘರ್ಷಕ್ಕೆ ಕಾರಣವಾಗಿರುವ ಬೆಳಗಾವಿ ಗಡಿವಿವಾದದ ಕುರಿತು ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ನವೆಂಬರ್ 30 ರಂದು ಅಂತಿಮ ವಿಚಾರಣೆಗೆ ದಿನಾಂಕ ಫಿಕ್ಸ್ ಆಗಿದೆ.
ನವೆಂಬರ್ 30 ರಂದು ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯಲಿದ್ದು ಕರ್ನಾಟಕದ ಪರವಾಗಿ ವಾದ ಮಂಡಿಸಲು ನುರಿತ,,ಕಾನೂನು ತಜ್ಞರ ಸಮೀತಿಯನ್ನು ರಚಿಸಲಾಗಿದೆ.ಈ ಸಮೀತಿಯಲ್ಲಿ ಮುಘುಲ್ ರೋಹಟಗಿ
ಶ್ಯಾಮ ದಿವಾನ್ ಉದಯ ಹೊಳ್ಳ ಬೆಳಗಾವಿಯ ಎಂ ಬಿ ಝಿರಲಿ ಸೇರಿದಂತೆ ಅನೇಕ ಜನ ಕಾನೂನು ತಜ್ಞರು ಇರುವುದು ವಿಶೇಷವಾಗಿದೆ.
ನವೆಂಬರ್ 30 ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಾದ,ಪ್ರತಿವಾದ ನಡೆಯಲಿದ್ದು,ಈ ವಿಚಾರದಲ್ಲಿ ಕೇಂದ್ರದ ಅಟಾರ್ನಿ ಜನರಲ್ ಮಂಡಿಸುವ ಲಿಖಿತ ಅಭಿಪ್ರಾಯ ಪ್ರಮುಖ ಪಾತ್ರವಹಿಸಲಿದೆ.ಬೆಳಗಾವಿ ಗಡಿವಿವಾದದಲ್ಲಿ ಕೇಂದ್ರ ಸರ್ಕಾರ ಮೊದಲನೆಯ ಪ್ರತಿವಾದಿಯಾಗಿದ್ದು ಕೇಂದ್ರ ಸರ್ಕಾರ,ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಅಗಸ್ಟ್ 30 ರಂದು ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
ನವೆಂಬರ್ 30 ರಂದು ಕೇಂದ್ರದ ಅಟಾರ್ನಿ ಜನರಲ್ ಮಂಡಿಸುವ ಅಭಿಪ್ರಾಯದ ಮೇಲೆ ಈಗ ಎಲ್ಲರ ಚಿತ್ತ. ಒಟ್ಟಾರೆ ಬೆಳಗಾವಿ ಗಡಿವಿವಾದಕ್ಕೆ ನವೆಂಬರ್ 30 ರಂದು ಕಾನೂನು ಸಂಘರ್ಷ ನಡೆಯಲಿದ್ದು ಈ ದಿನ ಯಾವ ರೀತಿಯ ನಿರ್ಧಾರಗಳು ಹೊರಬೀಳುತ್ತವೆ ಎನ್ನುವದನ್ನು ಕಾದು ನೋಡಬೇಕಿದೆ.
ಕರ್ನಾಟಕ ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷರಾಗಿ ಶಿವರಾಜ್ ಪಾಟೀಲ ಅವರನ್ನು ಕರ್ನಾಟಕ ಸರ್ಕಾರ ನೇಮಿಸಿದ್ದು ಈ ಆಯೋಗದ ಕಚೇರಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಶಿಪ್ಟ್ ಆಗುವದು ಅತ್ಯಗತ್ಯವಾಗಿದೆ.