Breaking News

ಬೆಳಗಾವಿಯ ನಾಲ್ಕು ಜನ ಯುವತಿಯರು ನೀರು ಪಾಲು

ಬೆಳಗಾವಿ-
ಬೆಳಗಾವಿಯಲ್ಲಿ ಘನಘೋರ ದುರಂತ ನಡೆದಿದೆ‌
*ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವುನೊಪ್ಪಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್ ನಲ್ಲಿ ಈ ದುರಂತ ನಡೆದಿದೆ.
ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ 40 ಯುವತಿಯರು.
ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದ ಐವರು ಯುವತಿಯರ ಪೈಕಿ,
ಐವರು ಯುವತಿಯರ ಪೈಕಿ ನಾಲ್ವರು ಯುವತಿಯರು ನೀರು ಪಾಲಾಗಿದ್ದಾರೆ.

ಓರ್ವಳ ಸ್ಥಿತಿ ಗಂಭೀರವಾಗಿದೆ.
ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20).
ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಮೃತಪಟ್ಟ ಯುವತಿಯರಾಗಿದ್ದಾರೆ.

ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ನಾಲ್ಕು ಜನ ಯುವತಿಯರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ತರಲಾಗಿದ್ದು. ಶವಾಗಾರದ ಬಳಿ ಮೃತ ಯುವತಿಯರ ಕುಟುಂಬಸ್ಥರ ಆಕ್ರಂದನ ನೋಡಲಾಗುತ್ತಿಲ್ಲ.

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *