ಬೆಳಗಾವಿ- ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮ ಪಂಚಾಯಿತಿ ಗಳಲ್ಲಿ ಈ ಮೊದಲು ಮರಾಠಿಗರು ನಮ್ಮ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ನಿರ್ಣಯ ಕೈಗೊಳ್ಳುವ ವಾಡಿಕೆ ಇತ್ತು ಆದ್ರೆ ನಿನ್ನೆಯ ದಿನ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಮಹಾರಾಷ್ಟ್ರದ ಹತ್ತು ಹಳ್ಳಿಗಳನ್ಬು ಕರ್ನಾಟಕಕ್ಕೆ ಸೇರಿಸಿ ಎಂದು ಠರಾವ್ ಪಾಸ್ ಮಾಡುವ ಮೂಲಕ ಮಹಾರಾಷ್ಟ್ರ ಗಡಿಯ ಮರಾಠಿ ಭಾಷಿಕರು ಮಹಾರಾಷ್ಟ್ರ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ.
ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ಕರ್ನಾಟಕಕ್ಕೆ ಸೇರುವ ಠರಾವ್ ಪಾಸ್ ಆಗಿರುವದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ.ಮರಾಠಿ ಭಾಷಿಕರಿಂದಲೇ ಈ ರೀತಿಯ ನಿರ್ಣಯ ಹೊರಬಿದ್ದ ಕಾರಣ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ವಿಚಾರದಲ್ಲಿ ಕಂಗಾಲ್ ಆಗಿರುವದು ನಿಜ.
90ರಷ್ಟು ಮಾರಾಠಿ ಭಾಷಿಕರಿರುವ ಜನರಿಂದ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಆಗಿರುವ ವಿಚಾರ ಮಹಾರಾಷ್ಟ್ರದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳೂ ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತ ಪಡಿಸಿ,ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಮಹಾರಾಷ್ಟ್ರ ಜತ್ತ ಕಾಲ್ಲೂಕಿನ 42 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಿರ್ಣಯ ಕೈಗೊಂಡ ಕಾರಣ, ಮಹಾರಾಷ್ಡ್ರದ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ ಆಗ 1900ಕೋಟಿ ಅನುದಾನದ ಅಭಿವೃದ್ಧಿ ಪ್ಯಾಕೇಜ್ ಕೊಡುವುದಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದ್ದರು.
ಇದೀಗ ಮಹಾರಾಷ್ಟ್ರ ನಾಯಕರಿಗೆ ಕಾಗಲ್ ಪಂಚಾಯತಿ ಠರಾವು ನಿರ್ಧಾರ ತೆಲೆನೋವಾಗಿ ಪರಿಣಮಿಸಿದೆ.ಕರ್ನಾಟಕದೊಂದಿಗೆ ವೀಲನಕ್ಕೆ ಸರ್ವಾನುಮತದ ನಿರ್ಣಯ ಕೈಗೊಂಡ ಪಂಚಾಯತಿಗಳು ಮಹಾ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ.ಮಳೆಗಾಲ ಇದ್ರೂ ಕಾಗಲ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ,ಹೀಗಿದ್ದರೂ ದೂಧಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಸರಬರಾಜು ಮಾಡ್ತಿರೋ ಮಹಾ ಸರ್ಕಾರದ ನಿರ್ಧಾರಕ್ಕೆ ಕಾಗಲ್ ತಾಲ್ಲೂಕಿನ ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಗಲ್ ತಾಲೂಕಿನಲ್ಲಿ 90ಕ್ಕಿಂತ ಹೆಚ್ಚಿನ ಜನರು ಮರಾಠಿ ಭಾಷಿಕರು ಇದ್ದಾರೆ.ಈಗ ಅವರಿಂದಲೇ ಕರ್ನಾಟಕಕ್ಕೆ ಸೇರ್ಪಡೆ ನಿರ್ಣಯ ಹೊರಬಿದ್ದಿದೆ.ಸರ್ಕಾರದ ಯಾವುದೇ ಆಶ್ವಾಸನೆಗೂ ಒಳಗಾಗಲ್ಲ ಎಂದ ಮುಖಂಡರು ಆಕ್ರೋಶ ಹೊರಹಾಕಿದ್ದುತುಂಬಿದ ಸಭೆಯಲ್ಲಿ ಕೈ ಮೇಲಕ್ಕೆತ್ತಿ ಕರ್ನಾಟಕಕ್ಕೆ ಸೇರುವ ನಿರ್ಧಾರ ಕೈಗೊಂಡು ಕರ್ನಾಟಕ್ಕೆ ಬಹಿರಂಗವಾಗಿಯೇ ಸಪೋರ್ಟ್ ಮಾಡಿದ್ದಾರೆ.
ದೂಧಗಂಗಾ ನದಿ ನೀರನ್ನು ಇಂಚಲಕರಂಜಿಗೆ ಕೊಡುವುಕ್ಕೆ ತೀವ್ರ ವಿರೋಧ ಮಾಡಿದ್ದು,ನೀರು ಸರಬರಾಜು ಮಾಡುವ ನಿರ್ಧಾರ ಕೈಬಿಡದಿದ್ದರೆ ಕರ್ನಾಟಕಕ್ಕೆ ಸೇರುವುದು ಹೋರಾಟ ನಿಲ್ಲುವದಿಲ್ಲ ಎನ್ನುತ್ತಿರೋ ಮುಖಂಡರು,ಮಹಾ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.ತನ್ನ ರಾಜ್ಯದಲ್ಲಿ ಇರೋ ಹಳ್ಳಿಗಳನ್ನೇ ಅಭಿವೃದ್ಧಿಪಡಿಸಲಿ,ಅದನ್ನು ಬಿಟ್ಟು ಕರ್ನಾಟಕದ ಐದು ಜಿಲ್ಲೆಯ 850ಹಳ್ಳಿಗಳು ಮಹಾರಾಷ್ಟ್ರ ಸೇರಬೇಕೆಂದು ಸುಪ್ರೀಂ ನಲ್ಲಿ ಕೇಸ್ ಹಾಕಿದ ಮಹಾರಾಷ್ಟ್ರ ಸರ್ಕಾರಕ್ಕೆ ಈಗ ಮರಾಠಿಗರೇ ಪಾಠ ಕಲಿಸಲು ಮುಂದಾಗಿದ್ದಾರೆ.