ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿ ಮಹಾನಗರದ ಹನುಮಾನ ನಗರಕ್ಕೆ ಹೊಂದಿಕೊಂಡಿರುವ ಜಾಧವ ನಗರದ ಈಜುಕೋಳದ ಬಳಿ ಚಿರತೆಯೊಂದು ಕಟ್ಟಡ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿದೆ.
ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿರುವ ಚಿರತೆ,ಕಂಪೌಂಡ್ ಗೋಡೆ ಜಿಗಿದು, ಜಾಧವ ನಗರದ ಓಪನ್ ಫೇಸ್ ನಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳಲ್ಲಿ ಅಡಗಿದೆ.ಸ್ಥ
ಳಕ್ಕೆ ಪೋಲೀಸ್ ಅಧಿಕಾರಿಗಳು,ಅರಣ್ಯ ಇಲಾಖೆಯ ಅಧಿಕಾರಿಗಳು,ಎಸ್ ಡಿ ಆರ್ ಎಫ್ ತಂಡ ಆಗಮಿಸಿ ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ಶುರು ಮಾಡಿದೆ.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದೆ,ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಚಿರತೆ ಶೋಧ ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದು,ಬೆಳಗಾವಿಯಲ್ಲಿ ಅಟ್ಯಾಕ್ ಮಾಡಿ ಅಡಗಿ ಕುಳಿತಿರುವ ಚಿರತೆ ಹಿಡಿಯಲು ಗದಗದಿಂದ ಅರಣ್ಯ ಇಲಾಖೆಯ ವಿಶೇಷ ತಂಡ ಬೆಳಗಾವಿಗೆ ಬರುತ್ತಿದೆ.
ಜಾಧವ ನಗರದಲ್ಲಿ ಚಿರತೆ ಬಂದಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಪತ್ತೆಗಾಗಿ ದ್ರೋಣ ಕ್ಯಾಮರಾ ಹಾರಿಸಿ,ಚಿರತೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.ಚಿರತೆ ಅಟ್ಯಾಕ್ ನಿಂದ ಕಟ್ಟಡ ಕಾರ್ಮಿಕ ಸಿದ್ರಾಯ ಲಕ್ಷ್ಮಣ ನೀಲಜಕರ ಸಾ ಅಷ್ಟೆ ಖನಗಾಂವ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.