ಬೆಳಗಾವಿ- ಬೆಳಗಾವಿ, ರಾಜ್ಯದ ಎರಡನೇಯ ರಾಜಧಾನಿ,ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಕರ್ನಾಟಕ,ಗೋವಾ,ಮಹಾರಾಷ್ಟ್ರ ,ಮೂರು ರಾಜ್ಯಗಳ ಸಂಪರ್ಕದ ಸೇತುವೆಯಾಗಿರುವ. ಕುಂದಾನಗರಿ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣ ಈಗ ಹೈಟೆಕ್ ಆಗಿದ್ದು,ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ನಿಲ್ಧಾಣದ ಹೊಸ ಕಟ್ಟಡ ಎಲ್ಲರ ಕಣ್ಮಣ ಸೆಳೆಯುತ್ತಿದೆ.
2016 ಡಿಸೆಂಬರ ತಿಂಗಳಲ್ಲಿ ಆಗಿನ ಮುಖ್ಯಮಂತ್ರಿ ಸಿದ್ರಾಮಯ್ಯ ನವರು ಬೆಳಗಾವಿಯ ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.2019 ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು,ಅನುದಾನದ ಕೊರತೆ ಸರ್ಕಾರದ ನಿರ್ಲಕ್ಷ್ಯ ದಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ತಡವಾದರೂ,ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗುತ್ತಿದೆ.
32.48 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ಧಾಣ ನಿರ್ಮಾಣ ಮಾಡಲಾಗುತ್ತಿದೆ.ಶೇ 80% ರಷ್ಟು ಕಾಮಗಾರಿ ಮುಗಿದಿದೆ,ಫೈನಲ್ ಟಚಪ್ ನಡೆಯುತ್ತಿದೆ.ಈಗಾಗಲೇ 25 ಕೋಟಿಗೂ ಅಧಿಕ ಹಣ ಖರ್ಚಾಗಿದೆ.ಬಸ್ ನಿಲ್ಧಾಣದಲ್ಲಿ 40 ಪ್ಲಾಟಫಾರ್ಮ ನಿರ್ಮಾಣ ಮಾಡಲಾಗುತ್ತಿದ್ದು.ಬೆಳಗಾವಿಯ ಬಸ್ ನಿಲ್ಧಾಣ ಈಗ ಹೈಟೆಕ್ ಸ್ವರೂಪ ಪಡೆದುಕೊಂಡಿದೆ.
ಬೆಳಗಾವಿಯ ಬಸ್ ನಿಕ್ಧಾಣಕ್ಕೆ ಪ್ರತಿದಿನ ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಎರಡು ಸಾವಿರಕ್ಕೂ ಹೆಚ್ಚು ಬಸ್ ಗಳು ಬರುತ್ತವೆ.60 ಸಾವಿರಕ್ಕೂ ಹೆಚ್ಚು ಜನ ಬೆಳಗಾವಿಯ ಬಸ್ ನಿಲ್ಧಾಣವನ್ನು ನಿತ್ಯ ಬಳಕೆ ಮಾಡುತ್ತಾರೆ.
ಬೆಳಗಾವಿಯ ಹೃದಯಭಾಗದಲ್ಲಿ ನಿರ್ಮಾಣಗೊಂಡ ಹೈಟೆಕ್ ಬಸ್ ನಿಲ್ಧಾಣ ಈಗ ಲಕಾ,ಲಕಾ,ಅಂತಾ ಹೊಳೆಯುತ್ತಿದ್ದು ಎಲ್ಲರನ್ನು ಆಕರ್ಷಿಸುತ್ತಿದೆ.