ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇಯ ದಿನವೂ ಅಹೋ ರಾತ್ರಿ ಮುಂದುವರೆದಿದ್ದು,ನಾಳೆ ರವಿವಾರವೂ ಬಸ್ ಗಳ ಓಡಾಟ ಇರುವುದಿಲ್ಲ ನಾಳೆಯೂ ಬಸ್ ಬಂದ್ ಮುಷ್ಕರ ಮುಂದುವರೆಯಲಿದೆ.
ಬೆಳಗಾವಿ ಬಸ್ ನಿಲ್ಧಾಣದಲ್ಲಿ ನಿಲ್ಲಿಸಿದ್ದ ನೂರಕ್ಕೂ ಹೆಚ್ಚು ಬಸ್ ಗಳನ್ನು ಬಸ್ ಡಿಪೋಗಳಿಗೆ ರವಾನಿಸಲಾಗಿದ್ದು,ಬೆಳಗಾವಿ ಬಸ್ ನಿಲ್ಧಾಣದಲ್ಲಿ ಈಗ ಸಾರಿಗೆ ನೌಕರರು ಮಾತ್ರ ಧರಣಿ ಮುಂದುವರೆಸಿದ್ದಾರೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು,ಬೆಂಗಳೂರಿನಲ್ಲಿ ಮಾತನಾಡಿ,ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ,ಇದನ್ನು ಬಿಟ್ಟು ಬೇರೆ ಯಾವುದೇ ಬೇಡಿಕೆ ಇದ್ದಲ್ಲಿ ಸರ್ಕಾರ ಅದಕ್ಕೆ ಸ್ಪಂದಿಸುತ್ತದೆ.ನಾಳೆಯೂ ಸಾರಿಗೆ ನೌಕರರು ಸೇವೆಗೆ ಹಾಜರಾಗದಿದ್ದರೆ,ನಾಳೆಯಿಂದ ಖಾಸಗಿ ವಾಹನಗಳ ವ್ಯೆವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದು,ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ.
ಸಾರಿಗೆ ನೌಕರರ ಮುಷ್ಕರದಿಂದ ಬೆಳಗಾವಿ ಡಿಪೋ,ಚಿಕ್ಕೋಡಿ ಡಿಪೋ ಸೇರಿ ಎರಡು ದಿನದಲ್ಲಿ ಎರಡು ಕೋಟಿ ಲಾಸು ಆಗಿದೆ ಎಂದು ಬೆಳಗಾವಿಯ ಡಿವ್ಹಿಜನಲ್ ಕಂಟ್ರೋಲರ್ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಒಂದು ದಿನ ಬಸ್ ಬಂದ್ ಆದರೆ ಬೆಳಗಾವಿ ಚಿಕ್ಕೋಡಿ ಡಿಪೋ ಸೇರಿ ಒಂದು ಕೋಟಿ ರೂ ನಷ್ಟವಾಗುತ್ತದೆ ಒಂದು ದಿನಕ್ಕೆ ಒಂದು ಕೋಟಿ ರೂ ಲಾಸು ಜೊತೆಗೆ ಪ್ರಯಾಣಿಕರಿಗೆ ತ್ರಾಸು ಆಗುತ್ತಿದೆ.
ಬೆಳಗಾವಿಯಲ್ಲಿ ಮುಷ್ಕರ ಮುಂದುವರೆದಿದ್ದು ಅಹೋರಾತ್ರಿ ಧರಣಿ ಮುಂದುವರೆಯಲಿದೆ.