ಬೆಳಗಾವಿ-ಏಪ್ರಿಲ್ 17ಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಎರಡು ದಿನ ಕಳೆದರೂ,ಎರಡೂ ರಾಜಕೀಯ ಪಕ್ಷಗಳು ಇನ್ನುವರೆಗೆ ಅಭ್ಯರ್ಥಿಗಳ ಘೋಷಣೆ ಮಾಡದೇ ಇರುವದರಿಂದ ಉಪ ಕದನ ಇನ್ನುವರೆಗೆ ರಂಗೇರಿಲ್ಲ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಗೊಂದಲವೇ ಗೊಂದಲ ಅಭ್ಯರ್ಥಿಗಳ. ಘೋಷಣೆ ವಿಳಂಬವಾಗುತ್ತಿದೆ ಹೀಗಾಗಿ,ಉಪಚುನಾವಣೆ ಕಾವು ಇಲ್ಲ,ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಸವಾಲ್ ಆಗಿದೆ.ಮೊ ದಲು ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡ್ಲಿ ಅಂತ ಬಿಜೆಪಿ.ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡ್ಲಿ ಅಂತ ಕಾಂಗ್ರೆಸ್. ಕಾದು ನೋಡುವ ತಂತ್ರ ಅನುಸರಿಸುತ್ತಿವೆ.
ಆಕಾಂಕ್ಷಿಗಳ ತೀವ್ರ ಪೈಪೋಟಿ ನಡೆಯುತ್ತಿದೆ ದೆಹಲಿ ಮಟ್ಟದಲ್ಲಿ ಲಾಭಿ ಈಗಲೂ ನಡೆಯುತ್ತಲೇ ಇದೆ.ಕೆ ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಹ ದೆಹಲಿಯಲ್ಲಿ ಇದ್ದಾರೆ.ದೆ ಹಲಿ ವರಿಷ್ಠರ ಬಳಿ ಮಾತುಕತೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಲಿದೆಯೇ ಅನ್ನೋದನ್ನು ಕಾದು ನೋಡಬೇಕಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಇವತ್ತು ಎರಡನೇಯ ದಿನ ಆದರೂ ಉತ್ಸಾಹ ಕಾಣುತ್ತಿಲ್ಲಬಿ ಜೆಪಿ ಆಕಾಂಕ್ಷಿಗಳ ಪಟ್ಟಿ ನೋಡಿ ಗೊಂದಲದಲ್ಲಿ ಬಿಜೆಪಿ ವರಿಷ್ಠರು ಇದ್ದುಜಿ ಲ್ಲೆಯ ಶಾಸಕರು ಅಧಿವೇಶನದಲ್ಲಿ ಬ್ಯೂಸಿಯಾಗಿದ್ದಾರೆ.ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆ ವಿಚಾರದಲ್ಲಿ ಬ್ಯೂಸಿ ಆಗಿದ್ದಾರೆ.ಕಾಂಗ್ರೆಸ್ ನಲ್ಲಿ ಎಲ್ಲವೂ ಮೌನ ಮೌನ.ಸತೀಶ್ ಜಾರಕಿಹೊಳಿ ಕಣಕ್ಕೆ ಇಳಿಸಲು ರಾಜ್ಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ.
ದೆಹಲಿ ಭೇಟಿ ಬಳಿಕ ಕಾಂಗ್ರೆಸ್ ಟಿಕೆಟ್ ಫೈನಲ್ ಅಂತ ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ.