ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ಮತ ಭೇಟೆ ಆರಂಭಿಸಿದ್ದು ಇಂದು ವಿವಿಧ ಸಮಾಜದ ಮುಖಂಡರ ಸರಣಿ ಸಭೆಗಳನ್ನು ನಡೆಸಿದರು.
ಮೊದಲನೇಯದಾಗಿ ಮರಾಠಾ ಸಮಾಜದ ಮುಖಂಡರ ಸಭೆ ನಡೆಯಿತು ಈ ಸಭೆಯಲ್ಲಿ ಮರಾಠಾ ಸಮಾಜದ ಮುಖಂಡರು ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಷರತ್ತುಭದ್ಧವಾದ ಬೆಂಬಲಕ್ಕೆ ಸಮ್ಮತಿ ಸೂಚಿಸಿದರು.
ಬೆಳಗಾವಿಯಲ್ಲಿ ಭಗವಾ ಧ್ವಜಕ್ಕೆ ಅವಮಾನವಾಗದಂತೆ ನೋಡಿಕೊಳ್ಳಬೇಕು,ಬೆಳಗಾವಿಯ ಮರಾಠಿ ಫಲಕಗಳಿಗೆ ರಕ್ಷಣೆ ಕೊಡಬೇಕು ಜೊತೆಗೆ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮರಾಠಾ ಸಮಾಜದ ಮುಖಂಡರು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು,
ಹಾಲುಮತ ಸಮಾಜ ಜೊತೆಗೆ ನೇಕಾರ ಸಮಾಜದ ಮುಖಂಡರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕವಾಗಿ ಸಭೆ ನಡೆಸಿ ಸಮಾಜದ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದರು.
ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ,ಸಮುದಾಯಗಳ ಪ್ರಮುಖರ ಸಭೆ ನಡೆಸಿದ್ದೇನೆ,ಮತ್ತೆ ಏ 7 ರಂದು ಪ್ರಚಾರಕ್ಕೆ ಬರುತ್ತೇನೆ,ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ,ಮೂರು ಲಕ್ಷಕ್ಕೂ ಅಧಿಕತಗಳ ಅಂತರದಿಂದ ಗೆಲ್ಲುತ್ತೇವೆ,ಎಂದು ಸಿಎಂ ವಿಶ್ವಾಸ ವ್ಯೆಕ್ತಪಡಿಸಿದರು.
ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ವಿಚಾರ,ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಸಿಡಿ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಬೆಂಗಳೂರಿನತ್ತ ಧಿಡೀರ್ ಪ್ರಯಾಣ ಬೆಳೆಸಿದರು..