ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಮತಬೇಟೆಯಾಡುತ್ತಿದ್ದು,ಇಂದು ಪ್ರಚಾರಕ್ಕೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿ,ಬೆಂಬಲ ವ್ಯೆಕ್ತವಾಗುತ್ರಿದೆ,ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸುತ್ತಾರೆ ಎಂದು ಸಿದ್ರಾಮಯ್ಯ ವಿಶ್ವಾಸ ವ್ಯೆಕ್ತ ಪಡಿಸಿದರು.
ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಮುಳುಗುತ್ತಿರುವ ಹಡಗು,ಎಂದು ಹೋದಲೆಲ್ಲಾ ಹೇಳ್ತಾ ಇದ್ದಾರೆ,ಯಡಿಯೂರಪ್ಪ ಕುಂತ ಹಡಗೇ ಈಗ ಮುಳುಗುತ್ತಿದೆ.ಯತ್ನಾಳ ಒಬ್ಬ ಸೀನಿಯರ್ ಬಿಜೆಪಿ ಲೀಡರ್ ಅವರು ಏನು ಹೇಳುತ್ತಿದ್ದಾರೆ ? ಎಂದು ಮಾದ್ಯಮಗಳಿಗೆ ಪ್ರಶ್ನಿಸಿದ ಸಿದ್ರಾಮಯ್ಯ ಯತ್ನಾಳರ ಮಾತು ಕೇಳಿದ್ರೆ ಯಡಿಯೂರಪ್ಪ ಕುಂತ ಹಡಗು ಮುಳುಗುತ್ತಿದೆ ಅಂತಾ ಅನಿಸೋದಿಲ್ವಾ ಎಂದರು.
ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿನ ಹರಕೆಯ ಕುರಿ ಎಂದು ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿಯಲ್ಲಿ ಮೊದಲು ಯಾರ ಹೆಸರು ಓಡಾಡುತ್ತಿತ್ತು,ಮಂಗಳಾ ಅಂಗಡಿ ಅವರಿಗೆ ಬಿಜೆಪಿಯವರು ಮಾಡಿದ್ದೇನು? ಸಿಟಿ ರವಿ ಯಾವಾಗಲೂ ಸುಳ್ಳು ಹೇಳ್ತಾನೆ ಅವನ ಹೇಳಿಕೆಗೆ ಉತ್ತರ ಕೊಡೋದಿಲ್ಲ ಎಂದು ಸಿದ್ರಾಮಯ್ಯ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ