Breaking News

ಯಾರಿಗೆ ಲಾಭ…ಯಾರಿಗೆ ನಷ್ಟ ಅಂತಾ ಹೇಳೋದು ಕಷ್ಟ….!!!!

ಬೆಳಗಾವಿ- ಬೆಳಗಾವಿ ಬೈ ಇಲೆಕ್ಷನ್ ಮತದಾನ ಮಗಿದಿದೆ.ಈಗ ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಎಲ್ಲಿ ಯಾರಿಗೆ ಲೀಡ್ ಶಿಕ್ಕಿದೆ,ಯಾವ ಸಮುದಾಯ ಯಾರ ಕೈ ಹಿಡಿದಿದೆ,ಯಾರು,ಯಾರಿಗೆ ಕೈ ಕೊಟ್ಟಿದ್ದಾರೆ,ಯಾರಿಂದ ಯಾರಿಗೆ ಲಾಭ ? ಯಾರಿಗೆ ನಷ್ಟ ಎನ್ನುವ ಗಂಭೀರ ಚರ್ಚೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಈಗ ಸಾಮಾನ್ಯವಾಗಿದೆ.

ಗೆಲುವಿನ ಕುರಿತು ಕಾಂಗ್ರೆಸ್ಸಿನ ಬೆಂಬಲಿಗರು,ಹಿತೈಶಿಗಳು,ಮತ್ತು ಕಾರ್ಯಕರ್ತರ ಒಂದು ಸರಳ ಲೆಕ್ಕಾಚಾರ,ಅದೇನಂದ್ರೆ  ಎಂಈಎಸ್ ನ ಶುಭಂ ಶಿಳಕೆ ಒಂದು ಲಕ್ಷ ಕ್ಕೂ ಹೆಚ್ವು ಮತಗಳನ್ನು ಪಡೆಯುತ್ತಾನೆ.ಬಿಜೆಪಿ ಮತಗಳು ವಿಭಜನೆಯಾಗಿ ಇದರ ಲಾಭ ಕಾಂಗ್ರೆಸ್ಸಿಗೆ ಅನ್ನೋದು ಒಂದು ಲೆಕ್ಕ….

ಈ ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿದೆ.ಕಾಂಗ್ರೆಸ್ಸಿನ ಸಂಪ್ರದಾಯಿಕ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗಿದ್ದು,ಕಡಿಮೆ ಮತದಾನ ಆದಲ್ಲಿ ಕಾಂಗ್ರೆಸ್ಸಿಗೆ ಲಾಭ ಅನ್ನೋದು ಕಾಂಗ್ರೆಸ್ಸಿನ ಹಿತೈಶಿಗಳ ಇನ್ನೊಂದು ಲೆಕ್ಕ…

ಆದ್ರೆ ಬಿಜೆಪಿ ವಲಯದಲ್ಲಿ ಇದೇ ರೀತಿಯ ಹಲವಾರು ಸಮೀಕರಣ ನಡೆಯುತ್ತಿದೆ.ಮತದಾನದ ಪ್ರಮಾಣ ಕಡಿಮೆ ಆಗಿದೆ ಹೀಗಾಗಿ ಬಿಜೆಪಿ ಗೆಲುವಿನ ಅಂತರವೂ ಕಡಿಮೆ ಆಗುವುದು ಸಹಜ,ಎಂಈಎಸ್ ಸ್ಪರ್ದೆಯಿಂದ ಬಿಜೆಪಿ ಗೆಲುವಿನ ಅಂತರ ಕಡಿಮೆ ಆಗಲು ಸಾಧ್ಯ,ಆದ್ರೆ ಇದರಿಂದ ಬಿಜೆಪಿಗೆ ಸೋಲು ಅಸಾದ್ಯ ಅನ್ನೋದು ಒಂದು ಲೆಕ್ಕ…

ಬೆಳಗಾವಿ ಉತ್ತರ,ಬೆಳಗಾವಿ ಗ್ರಾಮೀಣ,ಮತ್ತು ಬೆಳಗಾವಿ ದಕ್ಷಿಣದಲ್ಲಿ,ಕಾಂಗ್ರೆಸ್ ಆಂತರಿಕ ಕಚ್ಚಾಟದ ಹಿನ್ನಲೆಯಲ್ಲಿ ಮುಸ್ಲೀಂ ಸಮುದಾಯದ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ,ಪವಿತ್ರ ರಮಜಾನ್ ಉಪವಾಸ ಆಚರಣೆಯ ಕಾರಣ ಮುಸ್ಲೀಂ ಸಮುದಾಯದ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ,ಕಾಂಗ್ರೆಸ್ಸಿಗೆ ಸಂಪ್ರದಾಯಿಕ ಮತಗಳು ಕೈ ಕೊಟ್ಟಿರುವ ಕಾರಣ ಬಿಜೆಪಿ ಗೆಲ್ಲುತ್ತದೆ ಅನ್ನೋದು ಇನ್ನೊಂದು ಲೆಕ್ಕ.

ಈರೀತಿಯ ಹಲವಾರು ಲೆಕ್ಕಾಚಾರಗಳು,ವಿಶ್ಲೇಷಣೆಗಳು,ಸಮೀಕರಣಗಳು,ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಸಾಮಾನ್ಯವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯ ಎರಡೂ ಅಭ್ಯರ್ಥಿಗಳಿಗೆ ಗೆಲುವಿನ ವಿಶ್ವಾಸವಿದೆ.ಆದ್ರೆ ಇವರೇ ಗೆಲ್ಲುತ್ತಾರೆ ಎಂದು ಹೇಳಲು ಯಾರ ಬಳಿಯೂ ಸರಳ ಲೆಕ್ಕಾಚಾರ ಇಲ್ಲ.ಈ ಬಾರಿಯ ಉಪ ಚುನಾವಣೆಯ ಫಲಿತಾಂಶದ ಸಮೀಕರಣ ಯಾರ ತಲೆಗೂ ಹತ್ತುತ್ತಿಲ್ಲ,ಕ್ಷಣಕ್ಕೊಂದು ಲೆಕ್ಕಾಚಾರ ದಿನಕ್ಕೊಂದು ಸಮೀಕರಣಗಳು ಹೊರಬೀಳುತ್ತಿವೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ,ಎಂಟು ವಿಧಾನಸಭಾ ಕ್ಷೇತ್ರಗಳಿವೆ ಈ ಎಂಟೂ ಕ್ಷೇತ್ರಗಳ ಹೊರಗೆ ಕಾಣುವ ಚಿತ್ರಣವೇ ಬೇರೆ,ಅಂಡರ್ ಕರೆಂಟ್ ಇರೋದೆ ಬೇರೆ,ಎಂಟೂ ಕ್ಷೇತ್ರಗಳ ರಾಜಕೀಯ ಕಹಾನಿ ಚಿತ್ರ ವಿಚಿತ್ರ,ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಯಾರು ಯಾರಿಗೆ ಸಪೋರ್ಟ್ ಮಾಡಿದ್ದಾರೆ,ಯಾರು ಸೇಡು ತೀರಿಸಿಕೊಂಡಿದ್ದಾರೆ ಅನ್ನೋದು ಗೌಪ್ಯವಾಗಿದೆ.

ಯಾರಿಗೆ ಲಾಭ,ಯಾರಿಗೆ ನಷ್ಟ,ಗೆಲುವು ಯಾರದ್ದು ಎನ್ನುವ ತೀರ್ಮಾಣ ಮತಯಂತ್ರಗಳಲ್ಲಿ ಭದ್ರವಾಗಿದ್ದು ಮೇ 2 ರಂದೇ ಮತದಾರನ ಗುಟ್ಟು,ಮತ್ತು ಬೆಳಗಾವಿ ಜಿಲ್ಲೆಯ ಖರೇ,ಖರೇ ಪಾಲಿಟೀಕ್ಸ್ ಹೇಗಿದೆ ಅನ್ನೋದು ಬಹಿರಂಗವಾಗಲಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *