ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಚುನಾವಣಾ ಪ್ರಚಾರ ಮಾಡುತ್ತಿರುವದು.
ಬೆಳಗಾವಿ-ಬಿಜೆಪಿ ಶಿಸ್ತಿನ ಪಕ್ಷ ಇಲ್ಲಿ ಶ್ರದ್ಧೆ,ನಿಷ್ಠೆ ಸ್ಪೂರ್ತಿಯಿಂದ ಪಕ್ಷ ಸೇವೆ ಮಾಡಿದ್ರೆ ಎನೆಲ್ಲಾ ಅವಕಾಶ ಸಿಗಬಹುದು ಅನ್ನೋದಕ್ಕೆ ದಿ.ಸುರೇಶ್ ಅಂಗಡಿಯವರ ಇಬ್ಬರು ಪುತ್ರಿಯರಾದ ಶ್ರದ್ಧಾ,ಮತ್ತು ಸ್ಪೂರ್ತಿ ಸಾಕ್ಷಿಯಾಗುತ್ತಿದ್ದಾರೆ.
ಬೆಳಗಾವಿ ಉಪ ಚುನಾವಣೆಯ ಕಣದಲ್ಲಿ ಧುಮುಕಿರುವ ಇಬ್ಬರು ಪುತ್ರಿಯರಾದ ಶ್ರದ್ಧಾ ಮತ್ತು ಸ್ಪೂರ್ತಿ ಇಬ್ಬರೂ ತಾಯಿ ಮಂಗಲಾ ಅಂಗಡಿಯವರ ಗೆಲುವಿಗಾಗಿ ಸುಡು ಬಿಸಲಲ್ಲೂ ಪ್ರಚಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಶ್ರದ್ಧಾ ಮತ್ತು ಸ್ಪೂರ್ತಿ ತಾಯಿ ಮಂಗಲಾ ಅವರ ಪರವಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಇಬ್ಬರು ಮಕ್ಕಳು ಮತ್ತು ತಾಯಿ ಮಂಗಲಾ ಅವರಿಗೆ ರಾಜಕೀಯ ಹೊಸದಾದರೂ ಈ ಮೂವರು ಶ್ರದ್ಧೆ ಮತ್ತು ಸ್ಪೂರ್ತಿಯಿಂದ ಪಕ್ಷದ ಗೆಲುವಿಗೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಸರಳ ನಾಯಕ,ಅವರ ಮಕ್ಕಳಾದ ರಾಹುಲ್ ಪ್ರಿಯಾಂಕಾ ಅವರು ತಂದೆಯ ಗೆಲುವಿಗೆ ಅಖಾಡಕ್ಕೆ ಇಳಿದಿದ್ದಾರೆ,ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ,ಗೋಕಾಕ ತಾಲ್ಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು ಪುತ್ರ ರಾಹುಲ್ ಅರಭಾಂವಿ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಸುತ್ತಾಡಿ ತಂದೆಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ಅವರಿಗೆ ಪುತ್ರಿಯರಾದ ಶ್ರದ್ಧಾ ಮತ್ತು ಸ್ಪೂರ್ತಿ ಸಾಥ್ ಕೊಟ್ಟರೆ,ಕಾಂಗ್ರೆಸ್ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಪುತ್ರಿ ಪ್ರಿಯಾಂಕಾ,ಪುತ್ರ ರಾಹುಲ್ ತಂದೆಯ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
