ಬೆಳಗಾವಿ, ಅ. 11; ಅದ್ಧೂರಿ ನವರಾತ್ರಿ ಉತ್ಸವಕ್ಕೆ ಸಮಾರೋಪವಾಗಿ ಅದ್ಧೂರಿ ದುರ್ಗಾ ಮಾತಾ ಮೆರವಣಿಗೆ ನಗರದಲ್ಲಿ ಮಂಗಳವಾರ ನಡೆಯಿತು.
ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಸಂಜೆ ಭಾವೈಕ್ಯತೆ ಸಾರುವ ವೈಶಿಷ್ಠ್ಯಪೂರ್ಣ ಮೆರವಣಿಗೆ ಮೆರಗು ಕಣ್ಣು ತುಂಬಿಸುವಂತಿತ್ತು. ಕ್ರಿಶ್ಚಿಯನ್ ಮಂದಿಯೇ ಹೆಚ್ಚಿರುವ ಕ್ಯಾಂಪ್ ಪ್ರದೇಶದಲ್ಲಿ ಸಂಬ್ರಮದ ನವರಾತ್ರಿ ಉತ್ಸವವನ್ನು ಹಿಂದಿನಿಂದಲೂ ಆಚರಿಸಲಾಗುತ್ತಿದೆ. ಗಣಪತಿ ಮೆರವಣಿಗೆ ಮಾದರಿಯಲ್ಲಿ ವಿಜೃಂಭಣೆಯ ಮೆರವಣಿಗೆಯಲ್ಲಿ ಹಿಂದೂ, ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಬಾಂಧವರು ಸೇರಿ ಸಂಭ್ರಮದಿಂದ ಪಾಲ್ಗೊಳ್ಳುವುದೇ ನವರಾತ್ರಿ ಮೆರವಣಿಗೆಯ ವೈಶಿಷ್ಠ್ಯ.
ಸಂಜೆ 6 ಗಂಟೆ ವೇಳೆಗೆ ಅದ್ಧೂರಿಯಾಗಿ ದುರ್ಗಾ ದೇವಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕ್ಯಾಂಪ್ ಪ್ರದೇಶದ ಗಲ್ಲಿ ಗಲ್ಲಿ ಹಾಗೂ ಪ್ರತೀ ಬಡಾವಣೆಯಲ್ಲಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಎಲ್ಲಾ ಮೂರ್ತಿಗಳನ್ನೂ ಮಂಗಳವಾರ ಅದ್ಧೂರಿ ಮೆರವಣಿಗೆಯಲ್ಲಿ ಸಾಗಿಬಂದು ವಿಸರ್ಜನೆ ಮಾಡಲಾಗುತ್ತದೆ.
ದಸರಾ ಮೆರವಣಿಗೆಯಲ್ಲಿ ದುರ್ಗಾ ದೇವಿ ಮೂರ್ತಿಗಳ ಮುಂದೆ ವಿವಿಧ ಸಾಂಸ್ಕøತಿಕ ಕಲಾತಂಡಗಳ ಪ್ರದರ್ಶನ ಸಾಗಲಿದೆ. ಕಂಟೋನ್ಮೆಂಟ್ ಮಂಡಳಿಯ ಸದಸ್ಯರು, ಶಾಸಕರು, ಕ್ಯಾಂಪ್ ಪ್ರದೇಶದ ಗಣ್ಯರು ಹಾಗೂ ಜನಪ್ರತಿನಿಧಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾವೈಕ್ಯತೆ ಸಾರುವ ಈ ಮೆರವಣಿಗೆ ರಾತ್ರಿ 11 ಗಂಟೆಯ ತನಕ ಅದ್ಧೂರಿಯಾಗಿ ಸಾಗಲಿದ್ದು, ನಂತರ ದುರ್ಗಾಮೂರ್ತಿ ವಿಸರ್ಜನೆ ನಡೆಯಲಿದೆ.
ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …