ಬೆಳಗಾವಿ-ಬೆಳಗಾವಿ ಬಸ್ ನಿಲ್ಧಾಣದ ಎದುರಿನ ರಸ್ತೆ ಬಂದ್ ಆಗಿ ಬರೊಬ್ಬರಿ ಎರಡು ವರ್ಷಾಯ್ತು ನೋಡಿ,ಅಂಡರ್ ಪಾಸ್ ನಿರ್ಮಿಸಲು ಸಿಬಿಟಿ ಬಸ್ ನಿಲ್ಧಾಣದ ಎದುರು ಅಗೆದಿರುವ ಈ ತೆಗ್ಗು ಎರಡನೇಯ ವಾರ್ಷಿಕೋತ್ಸವದ ಸಂಬ್ರಮದಲ್ಲಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ,ಮತ್ತು ಸಿಟಿ ಬಸ್ ನಿಲ್ಧಾಣವನ್ನು ಜೋಡಿಸುವದಕ್ಕಾಗಿ ಅಂಡರ್ ಪಾಸ್ ನಿರ್ಮಿಸಲು, ಮುಖ್ಯ ರಸ್ತೆಯನ್ನೇ ಅಗೆದು ಎರಡು ವರ್ಷ ಕಳೆದರೂ,ಅಧಿಕಾರಿಗಳು ಅದನ್ನು ಮರೆತು ಬಿಟ್ಟಿದ್ದಾರೆ,ಶಾಸಕ ಅನೀಲ ಬೆನಕೆ ಈ ಕಾಮಗಾರಿ ಬೇಗ ಮುಗಿಸಿ ರಸ್ತೆ ಖುಲ್ಲಾ ಮಾಡಿ ಎಂದು ಸಾರಿಗೆ ಅಧಿಕಾರಿಗಳಿಗೆ,ಗುತ್ತಿಗೆದಾರನಿಗೆ ಹಲವಾರು ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ಅಭಯ ಪಾಟೀಲರಂತೂ ಬಸ್ ನಿಲ್ಧಾಣದ ಕಾಮಗಾರಿಯ ವಿಳಂಬದ ಬಗ್ಗೆ ಅಧಿಕಾರಿಗಳ ಎದುರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿ ನಗರ ಪ್ರವೇಶ ಕಲ್ಪಿಸುವ ಮುಖ್ಯ ರಸ್ತೆಯಲ್ಲೇ ಅಂಡರ್ ಪಾಸ್ ನಿರ್ಮಿಸಲು ಹೊಂಡ ತೆಗೆದು ಕಾಮಗಾರಿ ಅಪೂರ್ಣಗೊಳಿಸಿರುವದರಿಂದ ಈ ರಸ್ತೆ ಸಂಚಾರ ಬಂದ್ ಆಗಿ ಎರಡು ವರ್ಷ ಅವಧಿಗೂ ಹೆಚ್ಚಾಗಿದೆ.
ಡಿಸಿಎಂ,ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ,ಕೇಂದ್ರ ಬಸ್ ನಿಲ್ಧಾಣದ ಕಾಮಗಾರಿ ಸಾರಿಗೆ ಇಲಾಖೆಯಿಂದ ನಡೆಯುತ್ತಿದೆ. ಸಿಬಿಟಿ ಬಸ್ ನಿಲ್ಧಾಣದ ಕಾಮಗಾರಿ ,ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿದೆ. ಹೀಗಾಗಿ ಈ ಅಂಡರ್ ಪಾಸ್ ಗಾಗಿ ತೆಗೆದ ಹೊಂಡದಲ್ಲಿ ದೊಡ್ಡ ಹಗ್ಗಜಗ್ಗಾಟ,ಕಿತ್ತಾಟ ನಡೆದೆರುವದು ಸತ್ಯ.
ಅಧಿಕಾರಿಗಳ ಬೇಜವಾಬ್ದಾರಿ,ಸಾರಿಗೆ ಮಂತ್ರಿಗಳ ನಿರ್ಲಕ್ಷ್ಯ, ಹಾಗೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬೆಳಗಾವಿಯ ಮುಖ್ಯರಸ್ತೆಯ ಅಂಡರ್ ಪಾಸ್ ಹೊಂಡ ಪಂಚವಾರ್ಷಿಕ ಯೋಜನೆ ಆಗುವ ಹೊಸ್ತಿಲಲ್ಲಿದೆ…