ಬೆಳಗಾವ್ಯಾಗ ಚನ್ನಮನ ಮೂರ್ತಿ ಲಕ…ಲಕ…ಹೊಳೀತೈತಿ ನೋಡ್ಲ ಮಗಾ….!!!
ಬೆಳಗಾವಿ- ನೋಡಾಕ್ ಸುಂದರಿ ಜನ ಕರೀತಾರೆ ಇದಕ್ಕೆ ಕುಂದಾನಗರಿ ಜಗಳಕ್ಕ ಬಂದ್ರ ಇಲ್ಲಿ ಜನ ಆಗ್ತಾರೆ ಭಜರಂಗಿ ನಾಡ ವಿರೋಧಿಗಳಿಗೆ ಬಿಡ್ತಾರ ಫಿರಂಗಿ
ಮೊದ್ಲ ಚನ್ನಮ್ಮ ಸರ್ಕಲ್ ನೋಡಿದ್ರ ದ್ವಜ ಚಿಂದಿ ಆಗಿರತಿತ್ತ ,ಚನಮ್ಮನ ಮೂರ್ತಿಮ್ಯಾಲ ಧೂಳು ಕುಂಡುರ್ತಿತ್ತ ಅದನ್ನ ತೊಳ್ಯಾವ್ರ ಯಾರೂ ಗತಿ ಇರ್ತಿರಲಿಲ್ಲ ಈಗ ಈ ಸರ್ಕಲ್ ನಸೀಬ್ ಚೇಂಜ್ ಆಗೈತಿ ನೋಡ್ಲ ಮಗಾ
ಬೆಳಗಾವಿಗೆ ಹೊಸ ಡಿಸಿ ಬಂದಾರ ಎರಡು ಸಲಾ ಮೀಟೀಂಗ್ ಕರದ ಏನೇನ್ ಮಾಡಬೇಕ್ರಿ ಅಂತ ಕನ್ನಡದ ಮಂದಿಗೆ ಕೆಳ್ಯಾರ
ಕನ್ನಡದ ಲೀಡರ್ ಗಳು ಹೇಳಿದ್ದನ್ನು ನಮ್ಮ ಡಿಸಿ ಸಾಹೇಬ ಸೈ ಅಂದಾರ ಮೊದ್ಲ ಚನ್ನಮ್ಮ ತಾಯಿಗೆ ಜೈ ಅಂದಾರ ಅವರು ಹೇಳಿದ್ಹಂಗ ನಮ್ಮ ಮುನ್ಸಿಪಾಲ್ಟಿ ಕಮೀಶ್ನರ್ ಕೆಳ್ಯಾರ ಚನ್ನಮ್ಮ ತಾಯಿಯ ಮೂರ್ತಿ ಸ್ವಚ್ಛ ಮಾಡಿ ಕರೀ ಬಣ್ಣ ಕಿತ್ತ ಒಗದಾರ
ಕರೀ ಬಣ್ಣ ಕೆತ್ತ್ಯಾರ ಸುತ್ತ ಮುತ್ತ ಪರದೆ ಕಟ್ಯಾರ ಚನಮ್ಮ ಮೂರ್ತಿಯ ರೀಪೇರಿ ಮಾಡಾಕತ್ಹಾರ ಜನ ನಿಂತ ನೋಡಾಕತಾರ
ನವೆಂಬರ್ ಒಂದಕ್ಕ ಸರ್ಕಲ್ ದಾಗ ನಡೀತೈತಿ ಕನ್ನಡದ ಹಬ್ಬ ಆ ದಿನ ನಮ್ಮ ಚನ್ನಮ್ಮ ತಾಯಿಯ ಮೂರ್ತಿ ಲಕ…ಲಕ..ಅಂತಾ ಹೊಳೀತೈತಿ ಆ ದಿನ ಬೆಳಗಾವಿಗೆ ಓಡೋಡಿ ಬಾರಲೇ ಮಗಾ
ಮೆರವಣಿಗೆ ನಡೀತೈತಿ ಮೆರವಣಿಗೆ ಮ್ಯಾಲ ವಿಮಾನ ಹಾರತೈತಿ ಇದನ್ನು ನೋಡಿ ಜನ ಹುಚ್ಚೆದ್ದು ಕುಣೀತೈತಿ ಬಾಳ ಅಂದ್ರ ಬಾಳ ಮಜಾ ಬರತೈತಿ
ವಿಮಾನ ಮ್ಯಾಲಿಂದ ಹೂ ಕನ್ನಡದ ತಾಯಿ ಮ್ಯಾಲ ಬೀಳತೈತಿ ಈ ದಿನಾ ಹೊಟೇಲ್ ದಾವ್ರ ಲಾಡು ಬಾಯ್ಯಾಗ ಬೀಳತೈತಿ ಅಂದ ಹೋಳಗೀ ಊಟಾನೂ ಸಿಗತೈತಿ
ನವೆಂಬರ್ ಒಂದಕ್ಕ ಐದ ದಿನಾ ಬಾಕಿ ಉಳದೈತಿ ಕಂಗಾಲ್ ಕಂಪನಿ ಜಗಳಕ್ಕ ನಿಂತೈತಿ ಕನ್ನಡ ಹುಡಗೋರ ಹಬ್ಬದಾಗ ಕರೀ ಮುಸುಡಿಗೋಳ್ ಸೈಕಲ್ ಪಂಕ್ಚರ್ ಆಗತೈತಿ
ಹೊಡೀ ಒಂಬತ್ತ ನವೆಂಬರ್ ಒಂದಕ್ಕ ಬೆಳಗಾವಿ ಬಸ್ ಹತ್ತ್…..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ