ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವದರ ಬಗ್ಗೆ ಶನಿವಾರ ದಿನಾಂಕ 21 ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಫೈನಲ್ ಮಾಡುವದಕ್ಕಾಗಿಯೇ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಅದ್ಯಕ್ಷತೆಯಲ್ಲಿ ಒಂದು ಸಮೀತಿ ರಚಿಸಿದ್ದು ಈ ಸಮೀತಿಯ ಸಭೆ 21 ರಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ
ಸಮೀತಿಯ ಅದ್ಯಕ್ಷ ಎಂ.ಬಿ ಪಾಟೀಲ,ಸಂಯೋಜಕರಾದ ಸತೀಶ್ ಜಾರಕಿಹೊಳಿ,ಸಮೀತಿಯ ಸದಸ್ಯರಾದ ,ಎಲ್ ಹಣಮಂತಯ್ಯ ,ವೀರಕುಮಾರ ಪಾಟೀಲ,ಹೆಚ್ ಎಂ ರೇವಣ್ಣ, ಶ್ರೀನಿವಾ ಮಾನೆ,ಅಜಯ ಕುಮಾರ್ ಸರನಾಯಕ,ಅನೀಲ ಲಾಡ್,ಜಿಎಸ್ ಪಾಟೀಲ,ಬಸವರಾಜ ಶಿವಣ್ಣವರ ,ನಾಗರಾಜ ಛಬ್ಬಿ ಸೇರಿದಂತೆ ಸಮೀತಿಯ ಸದಸ್ಯರು,ಹಾಗು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು,ಡಿಫೀಟೆಡ್ ಕ್ಯಾಂಡಿಡೇಟ್ ಗಳು,ಮತ್ತು ಪ್ರಮುಖ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವ ಆಕಾಂಕ್ಷೆ ಬಹಳಷ್ಟು ಜನರಿಗೆ ಇದೆ ,ಆದ್ರೆ ಇನ್ನುವರೆಗೆ ಟಿಕೆಟ್ ಗಾಗಿ ಯಾರೊಬ್ಬರೂ ಅರ್ಜಿ ಕೊಟ್ಟಿಲ್ಲ. ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ನಾನೂ ಆಕಾಂಕ್ಷಿಯಾಗಿದ್ದೇನೆ ಅಂತಾ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.ಜೊತೆಗೆ ಚನ್ನರಾಜ ಹಟ್ಟಿಹೊಳಿ,ಸುನೀಲ ಹಣಮಣ್ಣವರ,ವಿನಯ ನಾವಲಗಟ್ಟಿ,ಸೇರಿದಂತೆ ಬಹಳಷ್ಟು ಜನ ಆಕಾಂಕ್ಷಿಗಳು ಕಾಂಗ್ರೆಸ್ ನಲ್ಲಿದ್ದಾರೆ.
ಯ ಆಯ್ಕೆ ಸಮೀತಿಯ ಮೀಟೀಂಗ್ ನಡೆಯಲಿದೆ ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.ಚುನಾವಣೆ ಘೋಷಣೆ ಆಗುವ ಮುನ್ನವೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುವ ಎಲ್ಲ ಸಾಧ್ಯತೆಗಳಿವೆ.