ಬೆಳಗಾವಿ- ಮಹಾತ್ಮಾ ಗಾಂಧೀಜಿಯವರ ಅದ್ಯಕ್ಷತೆಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿದ್ದು ಕೇವಲ ಒಂದೇ ಬಾರಿ,ಈ ಅಧಿವೇಶನ ನಡೆದಿದ್ದು ಬೆಳಗಾವಿಯಲ್ಲಿ ಅನ್ನೋದು ವಿಶೇಷ.
ರಾಷ್ಟ್ರಪಿತ ಓಡಾಡಿದ ನೆಲದಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡವೇ ಇರಲಿಲ್ಲ. ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಹಾನಗರ ಪಾಲಿಕೆಯ ಜಾಗೆಯನ್ನು ಮಂಜೂರು ಮಾಡಿಸಿದ್ರು,ಆಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಲಕ್ಷ್ಮೀ ಹೆಬ್ಬಾಳಕರ ಅವರು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಜಾಗೆಯನ್ನು ಖರೀಧಿ ಮಾಡಿದ್ದರು ಈಗ ಅದೇ ಜಾಗೆಯಲ್ಲಿ ಭವ್ಯ ಕಾಂಗ್ರೆಸ್ ಕಚೇರಿ ನಿರ್ಮಾಣವಾಗಿದ್ದು ಈ ಕಚೇರಿ ಗಾಂಧಿ ಜಯಂತಿಯ ದಿನ ಅಕ್ಟೋಬರ್ 2 ರಂದು ಲೋಕಾರ್ಪಣೆಗೊಳ್ಳಲಿದೆ.
ಕಟ್ಟಡದ ಕಾಮಗಾರಿ ಅರ್ದಕ್ಕೆ ನಿಂತುಕೊಂಡಿತ್ತು ಕಾಂಗ್ರೆಸ್ ಕಚೇರಿಯ ಕಾಮಗಾರಿ ಮುಗಿಯುತ್ತೋ ಇಲ್ಲವೋ ಎನ್ನುವ ಅನುಮಾನ ಬರುವಷ್ಟರಲ್ಲಿಯೇ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಸತೀಶ್ ಜಾರಕಿಹೊಳಿ ಸ್ವಂತ ಹಣ ಖರ್ಚು ಮಾಡಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ಜಾಗೆ ಖರೀಧಿ ಮಾಡುವಾಗ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು ಆ ಸಂಧರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಜಾಗೆ ಖರೀಧಿ ಮಾಡಲು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಅರ್ದಕ್ಕೆ ನಿಂತ ಕಾಂಗ್ರೆಸ್ ಕಚೇರಿಯ ಕಾಮಗಾರಿ ಪೂರ್ಣಗೊಳಿಸಿದ್ದಾರೆ,ಎರಡನೇಯ ಅಂತಸ್ತಿನ ಕಾಮಗಾರಿಯೂ ಪೂರ್ಣಗೂಳಿಸಿ, ಅಲ್ಲಿ,ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರ ಕಚೇರಿ ವ್ಯೆವಸ್ಥೆ ಮಾಡಿಸಿದ್ದಾರೆ,
ಒಟ್ಟಾರೆ ಗಾಂಧಿ ನಡೆದಾಡಿದ ನೆಲದಲ್ಲಿ ಗಾಂಧೀ ಜಯಂತಿಯ ದಿನವೇ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗುತ್ತಿರುವದು ವಿಶೇಷವಾಗಿದೆ
ಅಕ್ಟೋಬರ್ 2 ರಂದು,ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್,ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ, ಎಸ್ ಆರ್ ಪಾಟೀಲ,ಮತ್ತು ಕಿಪಿಸಿಸಿಯ ಎಲ್ಲ ಕಾರ್ಯಾಧ್ಯಕ್ಷರು ಬೆಳಗಾವಿಗೆ ಬರಲಿದ್ದು ಅಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.