Breaking News

ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ರಸ್ತೆಗಳ ಡಾಂಬರೀಕರಣ,

ಬೆಳಗಾವಿ- ಬೆಳಗಾವಿ ನಗರದಲ್ಲಿ ಅಗಲೀಕರಣಗೊಂಡ ಹಲವಾರು ರಸ್ತೆಗಳಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡುವ ಕಾರ್ಯ ಭರದಿಂದ ಸಾಗಿದೆ

ಬೆಳಗಾವಿ ನಗರದ ಫೋರ್ಟ ರಸ್ತೆ,ಪಾಟೀಲ ಗಲ್ಲಿ ಮತ್ತು ದರ್ಬಾರ್ ಗಲ್ಲಿಯಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆಯಿತ್ತಿದೆ ದರ್ಬಾರ ಗಲ್ಲಿಯಲ್ಲಿ ರಸ್ತೆ ಡಾಂಬರೀಕರಣದ ಜೊತೆಗೆ ಹೈಟೆಕ ಬೀದಿ ದೀಪಗಳನ್ನು ಅಳವಡಿಸಿ ಇದನ್ನು ಹೈಟೆಕ್ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ

ದರ್ಬಾರ ಗಲ್ಲಿಯಲ್ಲಿ ಈಗಾಗಲೇ ಮಾಸ್ಟರ್ ಪ್ಲಾನ್ ಆಗಿ ರಸ್ತೆ ಅಗಲೀಕರಣ ಗೊಂಡಿದೆ ಇಲ್ಲಿಯ ರಸ್ತೆಗಳ ಇಕ್ಕೆಲುಗಳಲ್ಲಿ ಅಡವಾನ್ಸ ಟೆಕ್ನಾಲಾಜಿಯ ಆಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು ಇದನ್ನು ಹೈಟೆಕ್ ಮಾರುಕಟ್ಟೆ ಮಾಡುವದು ಸ್ಥಳೀಯ ಶಾಸಕ ಫೀರೋಜ್ ಸೇಠ ಅವರ ಕನಸಾಗಿದೆ

ಕಡೋಲ್ಕರ್ ಗಲ್ಲಿಯಲ್ಲಿ ಮಾಸ್ಟರ್

ಬೆಳಗಾವಿ ನಗರದಲ್ಲಿ ಗಣಪತಿ ಬೀದಿಗೆ ಹೊಂದಿಕೊಂಡಿರುವ ಕಡೋಲ್ಕರ್ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಲು ಬೆಳಗಾವಿ ಮಹಾ ನಗರ ಪಾಲಿಕೆ ನಿರ್ಧರಿಸಿದೆ ಈ ರಸ್ತೆಯನ್ನು ನಲವತ್ತು ಅಡಿ ಅಗಲೀಕರಣ ಮಾಡಲು ಈಗಾಗಲೇ ಮಾರ್ಕಿಂಗ್ ಮಾಡಲಾಗಿದೆ ಕಡೋಲ್ಕರ್ ಗಲ್ಲಿಯಲ್ಲಿ ಗಣಪತಿ ಗಲ್ಲಿ ಕಾರ್ನರ್ ದಿಂದ ಹುತಾತ್ಮ ಚೌಕವರೆಗೆ ಶೀಘ್ರದಲ್ಲಿಯೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ

ಜೊತೆಗೆ ಭೇಂಡಿ ಬಝಾರ ವೃತ್ತದಿಂದ ಆಝಾದ ಗಲ್ಲಿಯಲ್ಲಿ ಕರ್ನಾಟಕ ಚೌಕ ವರೆಗೂ ಮಾರ್ಕಿಂಗ್ ಮಾಡಲಾಗಿದ್ದು ಈ ರಸ್ತೆಯೂ ಅಗಲೀಕರಣಗೊಳ್ಳಲಿದೆ

ಶಾಸಕ ಸೇಠ ಮತ್ತು ಪಾಲಿಕೆಯ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಎಲ್ಲ ಕಾಮಗಾರಿಗಳನ್ನು ಪರಶೀಲಿಸಿದರು

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *