ಬೆಳಗಾವಿ- ಬೆಳಗಾವಿ ಮಹಾನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಖದೀಮರನ್ನು ಬಂಧಿಸುವಲ್ಲಿ ಮಾರ್ಕೆಟ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.
ಮಾರ್ಕೆಟ್ ಠಾಣೆಯ ಇನೆಸ್ಪೆಕ್ಟರ್ ಸಂಗಮೇಶ ಶಿವಯೋಗಿ ಅವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿದ ಪೋಲೀಸರು,ಸುಮಾರು 3 ಲಕ್ಷ ರೂ ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಂಡು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್ ಕಳ್ಳತನ ಮಾಡುವ ಆರೋಪದ ಮೇಲೆ, ಬೆಳಗಾವಿ – ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಆಸ್ಪತ್ರೆ ಬಳಿಯ ನಿವಾಸಿ 22 ವರ್ಷದ ಅಕ್ಷಯ ಅಶೋಕ ತಾಂದಳೆ,ಉದ್ಯಮಬಾಗ ರಾಜಾರಾಮ ನಗರದ ನಿವಾಸಿ 24 ವರ್ಷದ ಪ್ರಸಾದ ಅಶೋಕ ಪಾಟೀಲ, ಚವ್ಹಾಟಗಲ್ಲಿಯ,ಓಂಕಾರ ಶ್ರೀಕಾಂತ ಇಂಗಳೆ,ಬೆಳಗಾವಿ ಕೋಳಿ ಗಲ್ಲಿಯ 22 ವರ್ಷದ ಶುಭಂ ರಾಜು ವಾಡಕರ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ