ಬೆಳಗಾವಿ-ಶಾಸಕರಾದ ಅಭಯ ಪಾಟೀಲ ಇವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಚ್ಚೆ ಹಾಗೂ ಪೀರನವಾಡಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿ ಮಾಡುವಂತೆ ಮಾನ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಶಾಸಕ ಅಭಯ ಪಾಟೀಲ ಅವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗಲಿದೆ.
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಮಚ್ಛೆ ಮತ್ತು ಪೀರನವಾಡಿ ಗ್ರಾಮ ಪಂಚಾಯತಿ ಗಳನ್ನು ಮೇಲ್ದರ್ಜೆಗೇರಿಸಿ ಇಂದಿನ ಕ್ಯಾಬಿನೆಟ್ ಮೀಟೀಂಗ್ ನಲ್ಲಿ ಅನುಮೋದಿಸುವ ಸಾದ್ಯತೆ ಇದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಮೀಟೀಂಗ್ ದಲ್ಲಿ ಮಚ್ಛೆ ಪೀರನವಾಡಿ ಗ್ರಾಮಗಳು ಚರ್ಚೆಗೆ ಬರಲಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ