ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಗ್ರಹಣ ಹಿಡಿದಿದೆ.ಚುನಾವಣೆ ಯಾವಾಗ ನಡೆಯುತ್ತದೆ ಅನ್ನೋದು ಗೊತ್ತಿಲ್ಲ.ಆದ್ರೆ ಚುನಾವಣೆಯ ಕಾವು ಆರಂಭವಾಗಿರುವುದು ಸತ್ಯ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಿಂಬಾಲ್ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿದೆ .ಬಿಜೆಪಿಯ ಈ ನಿರ್ಧಾರ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ನಡುಕ ಹುಟ್ಟಿಸಿದೆ.ಕಾಂಗ್ರೆಸ್ ಚಿಂತೆಗೆ ಬಿದ್ದಿದೆ ,ಜೆಡಿಎಸ್ ಬಂಡಾಯ ನಾಯಕರಿಗೆ ಬಲೆ ಹಾಕಲು ಚಿಂತನೆ ಮಾಡುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಷ್ಟು ದಿನ ಭಾಷಾ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು.ಕನ್ನಡ ಭಾಷಿಕ ನಗರ ಸೇವಕರು,ಉರ್ದು ಭಾಷಿಕ ನಗರ ಸೇವಕರು,ಮರಾಠಿ ಭಾಷಿಕ ನಗರ ಸೇವಕರೆಂದು ಗುರುತಿಸಿಕೊಳ್ಳುವ ಸಂಪ್ರದಾಯ ಬೆಳಗಾವಿ ಪಾಲಿಕೆಯಲ್ಲಿ ಇತ್ತು.ಗೆದ್ದು ಬಂದ ಎಲ್ಲ ಮರಾಠಿ ಭಾಷಿಕರು ಎಂಈಎಸ್ ನಗರ ಸೇವಕರೆಂದು ಲೇಬಲ್ ಹಚ್ಚುವ ಕೆಲಸವನ್ನು ಈ ಎಂಈಎಸ್ ನಾಯಕರು ಮಾಡುತ್ತಾ ಬಂದಿದ್ದಾರೆ.
ಬಿಜೆಪಿ ಈಗ ಸಿಂಬಾಲ್ ಮೇಲೆ ಚುನಾವಣೆ ಎದುರಿಸಿದರೆ ,ನಮ್ಮ ಗತಿ ಏನು ? ಎನ್ನುವ ಚಿಂತೆ ನಾಡವಿರೋಧಿಗಳಿಗೆ ಆರಂಭವಾಗಿದೆ ,ಬೆಳಗಾವಿಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಈಗಿನಿಂದಲೇ ಲಾಬಿ ಶುರುವಾಗಿದ್ದು ಕಾಂಗ್ರೆಸ್ ನಿಶ್ಚಿಂತವಾಗಿದೆ ಚುನಾವಣೆ ಘೋಷಣೆ ಆದ ಬಳಿಕ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದೆ
ಬೆಳಗಾವಿ ನಗರದಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ತೋರಿಸಲು ತಯಾರಿ ನಡೆಸಿದೆ .ಬಿಜೆಪಿ ,ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳಿಗೆ ಬಲೆ ಹಾಕಲು ಪ್ಲ್ಯಾನ್ ಮಾಡುತ್ತಿದೆ
ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ ಸಿಂಬಾಲ್ ಮೇಲೆ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ
ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸಿಂಬಾಲ್ ಮೇಲೆ ಚುನಾವಣೆ ಎದುರಿಸುತ್ತದೆಯೋ ಎಂದು ಬೆಳಗಾವಿ ಮಹಾನಗರ ಜಿಲ್ಲಾ ಅದ್ಯಕ್ಷ ರಾಜು ಸೇಠ ಅವರನ್ನು ವಿಚಾರಿಸಿದಾಗ ಅವರು ಹೇಳಿದ್ದು ಹೀಗೆ…
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ ಚುನಾವಣೆ ಘೋಷಣೆ ಆದ ಬಳಿಕ ಬೆಳಗಾವಿ ಮಹಾನಗರದ ಕಾಂಗ್ರೆಸ್ ನಾಯಕರ,ಮತ್ತು ಕಾರ್ಯಕರ್ತರ ಸಭೆ ಕರೆಯುತ್ತೇವೆ.ಅವರ ಅಭಿಪ್ರಾಯಗಳನ್ನು ಆಲಿಸುತ್ತೇವೆ.ಅವರ ಅಭಿಪ್ರಾಯವನ್ನು ಕೆಪಿಸಿಸಿ ಗೆ ತಿಳಿಸುತ್ತೇವೆ ಕಾರ್ಯಕರ್ತರ ಅಭಿಪ್ರಾಯ ಕಾಂಗ್ರೆಸ್ ನಾಯಕರ ಆದೇಶ ಏನಾಗುತ್ತದೆಯೋ ಅದನ್ನು ಪಾಲಿಸುತ್ತೇವೆ .ಈಗ ಸದ್ಯಕ್ಕೆ ಈ ಕುರಿತು ಚರ್ಚೆ ಮಾಡುವದಿಲ್ಲ , ಚುನಾವಣೆ ಬಂದಾಗ ನೋಡೋಣ ಎಂದಿದ್ದಾರೆ. ರಾಜು ಸೇಠ
ಒಟ್ಡಾರೆ ಬೆಳಗಾವಿ ಪಾಲಿಕೆಯ ಚುನಾಣೆಗಾಗಿ ಕಸರತ್ತು ನಡೆದಿದೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ ಚುನಾವಣೆಗೆ ಸ್ಪರ್ದೆ ಮಾಡುವ ಆಕಾಂಕ್ಷಿಗಳು ತಮ್ಮ ವಾರ್ಡುಗಳಲ್ಲಿ ಗೆರಿ,ಗೆರಿ ಅಂಗಿ ಹಾಕೊಂಡು ಪೋಜ್ ಕೊಡುತ್ತಿದ್ದಾರೆ