ಬೆಳಗಾವಿ- ಬೆಳಗಾವಿ- ಹಾಗು ಧಾರವಾಡ- ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆ ಬಹುತೇಕ ಡಿಸೆಂಬರ್ ಅಥವಾ ಜನೇವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.
ಮೀಸಲಾತಿಗೆ ಸಮಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ,ಮಾರ್ಚ ತಿಂಗಳಲ್ಲಿ ವಿಚಾರಣೆ ನಡೆಯಬೇಕಿತ್ತು ಆದ್ರೆ ಕೋವೀಡ್ ಹಿನ್ನಲೆಯಲ್ಲಿ ವಿಚಾರಣೆ ವಿಳಂಬವಾಗಿದ್ದು ಮುಂದಿನ ತಿಂಗಳು ಫೈನಲ್ ಹೇರಿಂಗ್ ನಡೆಯಲಿದ್ದು ಎರಡೂ ಮಹಾನಗರ ಪಾಲಿಕೆಗಳ ಚುನಾವಣೆಯ ತೊಡಕು ನಿವಾರಣೆ ಆಗುವ ಸಾಧ್ಯತೆ ಇದೆ.
ನ್ಯಾಯಾಲಯದ ಆದೇಶ ಹೊರಬಿದ್ದ ತಕ್ಷಣ ಚುನಾವಣೆ ನಡೆಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಸದ್ದಿಲ್ಲದೇ ಮಾಡಿಕೊಳ್ಳುತ್ತಿದೆ.ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಚುನಾವಣೆಯ ಸಿದ್ಧತೆಗಾಗಿ ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ತಿಂಗಳಲ್ಲಿ ತಡೆಯಾಜ್ಞೆಯ ಕುರಿತು ಅಂತಿಮ ವಿಚಾರಣೆ ನಡೆದ್ರೆ,ಡಿಸಂಬರ್ ಅಥವಾ ಜನೇವರಿ ತಿಂಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ,ಮತ್ತು ಹುಬ್ಬಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಡೆಯುವುದು ಖಚಿತ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ