Breaking News

ಬೆಳಗಾವಿ ಪಾಲಿಕೆಯ,ಕನ್ನಡ ಧ್ವಜ ಸ್ತಂಭದ ಬುನಾದಿ ಈಗ ಸುಭದ್ರ….!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ನಿರಂತರವಾಗಿ ಕನ್ನಡದ ಧ್ವಜ ಹಾರಾಡಬೇಕು ಎನ್ನುವದು ಗಡಿನಾಡು ಕನ್ನಡಿಗರ ದಶಕಗಳ ಮಹಾದಾಸೆಯಾಗಿತ್ತು,ಈ ಕುರಿತು, ಹಲವಾರು ಜನ ಕನ್ನಡಪರ ಹೋರಾಟಗಾರರು ಕಂಡ ಕನಸು ಇವತ್ತು ನನಸಾಗಿದೆ.

ನಿನ್ನೆ ಬೆಳಿಗ್ಗೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ,ಕಸ್ತೂರಿ ಭಾವಿ,ವಾಜೀದ ಹಿರೇಕೋಡಿ ಸೇರಿದಂತೆ ಹಲವಾರು ಜನ ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡ ಧ್ವಜ ಸ್ತಂಭ ಅನಾವರಣ ಮಾಡಿ ಕನ್ನಡ ಧ್ವಜವನ್ನು ಹಾರಿಸಿದ್ದರು.

ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ ಕನ್ನಡಪರ ಹೋರಾಟಗಾರು ನಿನ್ನೆಯಿಂದ ಅಹೋರಾತ್ರಿ ಕನ್ನಡ ಧ್ವಜ ಕಾವಲು ಮಾಡಿದ್ರು,ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ರಾತ್ರಿಯವರೆಗೂ ಕನ್ನಡ ಧ್ವಜಕ್ಕೆ ಈ ಕನ್ನಡ ಸೇನಾನಿಗಳು ಭದ್ರತೆ ನೀಡೀದ್ದರು.

ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ಅಧಿಕೃತಗೊಳಿಸಬೇಕು ಜಿಲ್ಲಾಡಳಿತ ಅದಕ್ಕೆ ಭದ್ರತೆ ನೀಡಬೇಕೆಂದು ಕನ್ನಡಪರ ಹೋರಾಟಗಾರರು ಪಟ್ಟು ಹಿಡಿದು ಕುಳಿತುಕೊಂಡರು,ಪಾಲಿಕೆ ಆಯುಕ್ತರು ,ಹಾಗೂ ಪೋಲೀಸ್ ಅಧಿಕಾರಿಗಳು ಹೋರಾಟಗಾರರ ಜೊತೆ ನಡೆಸಿದ ಸಂಧಾನವೂ ವಿಫಲವಾಯಿತು.

ಇಂದು ಸಂಜೆ ಮಂಗಳವಾರ ರಾತ್ರಿಯವರೆಗೂ ಪೋಲೀಸರು ಹೋರಾಟಗಾರರನ್ನು ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದರು,ಆದ್ರೆ ಹೋರಾಟಗಾರರು ಜಿಲ್ಲಾಧಿಕಾರಿಗಳು ನಮಗೆ ಭರವಸೆ ಕೊಡುವವರೆಗೂ ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದ ಬಳಿಕ ಪೋಲೀಸರು ಅಲ್ಲಿಂದ ತೆರಳಿದರು.

ಪಾಲಿಕೆ ಆವರಣದಿಂದ ಪೋಲೀಸರು ಜಾಗ ಖಾಲಿ ಮಾಡುತ್ತಿದ್ದಂತೆಯೇ ಪಾಲಿಕೆಗೆ ಆಗಮಿಸಿದ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಕನ್ನಡ ಧ್ವಜ ಕಂಬಕ್ಕೆ ಭದ್ರ ಬುನಾದಿ ಹಾಕಿ ದ್ವಜ ಸ್ತಂಭದ ಬುನಾದಿಗೆ ಕಾಂಕ್ರೀಟ್ ಹಾಕುವ ಮೂಲಕ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ

ತಾತ್ಕಾಲಿಕವಾಗಿದ್ದ ಕನ್ನಡ ಧ್ವಜ ಸ್ತಂಭದ ಬುನಾದಿ ಈಗ ಮತ್ತಷ್ಟು ಭದ್ರವಾಗಿದ್ದು ಈ ಕನ್ನಡ ಧ್ವಜ ಸ್ತಂಭಕ್ಕೆ ಈಗಲೂ ಕನ್ನಡಪರ ಹೋರಾಟಗಾರರು ಕಾವಲು ನೀಡಿದ್ದಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *