ಕೇಳಿದ್ದು ಅಭಿಪ್ರಾಯ, ಹೇಳಿಕೊಂಡಿದ್ದು ಸಮಸ್ಯೆ ,ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆಗಳ ಗೆಜೆಟ್.,..!!!

ಬೆಳಗಾವಿ ಈಗ ಸ್ಮಾರ್ಟ್ ಸಿಟಿ,ಹೀಗಾಗಿ ಈ ವರ್ಷ ಸ್ಮಾರ್ಟ್ ಬಜೆಟ್ ಮಂಡಿಸುವದು ಪಾಲಿಕೆ ಆಡಳಿತಾಧಿಕಾರಿ ಆಗಿರುವ ಡಿಸಿ ಬೊಮ್ಮನಹಳ್ಳಿ ಅವರ ಸಂಕಲ್ಪವಾಗಿದ್ದು,ಇಂದು ಬಜೆಟ್ ಕುರಿತು ಬುದ್ದಿಜೀವಿಗಳ,ಸಂಘ ಸಂಸ್ಥೆಗಳ ಅಭಿಪ್ರಾಯ ಆಲಿಸಿದರು.

ಇಂದು ಬೆಳಗಾವಿ ಪಾಲಿಕೆ ಕಚೇರಿಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬುದ್ದಿ ಜೀವಿಗಳು,ಚಿಂತಕರು,ಸಂಘ ಸಂಸ್ಥೆಗಳ ಪ್ರತಿನಿಧಿ ಗಳು,ಮಾಜಿ ಮಹಾಪೌರರು,.ಮಾಜಿ ನಗರಸೇವಕರು ಭಾಗವಹಿಸಿದ್ದರು.

ಸಭೆಯಲ್ಲಿ ಒಬ್ಬೊಬ್ಬರಾಗಿ ನಗರದಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡರು,ಆರಂಭದಲ್ಲಿ ಉದ್ಯಮಿಗಳು ಮಾತನಾಡಿ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ,ಸರಿಯಾದ ರಸ್ತೆ ಇಲ್ಲ ಅದು ಇಲ್ಲ, ಇದೂ ಇಲ್ಲ ,ಎಲ್ಲರಿಗಿಂತ ಹೆಚ್ಚಾಗಿ ನಾವೇ ತೆರಿಗೆ ಕಟ್ಟುತ್ತೇವೆ ಪಾಲಿಕೆ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಭೆಯಲ್ಲಿ ತಮಗಾದ ಅನ್ಯಾಯವನ್ನು ತೋಡಿಕೊಂಡರು

ಇನ್ನು ಕೆಲವರು ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ,ಬೀದಿ ಜಾನುವಾರಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೆ ಬಜೆಟ್ ನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದ್ರು ನಗರದ ನಾಲಾಗಳ ಸ್ವಚ್ಛತಗೆ ಬಜೆಟ್ ನಲ್ಲಿ ಅನುದಾನ ಕಲ್ಪಿಸುವ ಬೇಡಿಕೆಯೂ ಸಭೆಯಲ್ಲಿ ಮಂಡನೆ ಆಯಿತು.

ನಗರದ ಬುದ್ದಿ ಜೀವಿಗಳು ಬೀದಿ ವ್ಯಾಪಾರಿಗಳ,ತಳ್ಳುವ ಗಾಡಿಗಳ ಹಾವಳಿಯಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ,ಕೂಡಲೇ ಹಾಕರ್ಸ್ ಝೋನ್ ಗಳನ್ನು ಮಾಡಬೇಕೆಂದು ಸಲಹೆ ನೀಡಿದ್ರು

ಎಲ್ಲರ ಸಮಸ್ಯೆ ಆಲಿಸಿದ ಪಾಲಿಕೆ ಆಡಳಿತಾಧಿಕಾರಿ ಡಿಸಿ ಬೊಮ್ಮನಹಳ್ಳಿ ಜನರ ಭಾವನೆಗಳಿಗೆ ಬಜೆಟ್ ನಲ್ಲಿ ಸ್ಪಂದನೆ ಸಿಗಬೇಕು ಬಜೆಟ್ ನಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು ಈ ಬಾರಿಯ ಬಜೆಟ್ ನಗರನಿವಾಸಿಗಳ ಬಜೆಟ್ ಆಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *