Breaking News

ಪಾಲಿಕೆ ಬಜೆಟ್…ಹಳೆಯ ಪಿಸ್ತೂಲ್ ಗೆ ..ಹೊಸ ಬುಲೆಟ್….!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ರತನ ಮಾಸೇಕರ ಅವರು ಸರ್ಪಲಸ್ ಬಜೆಟ್ ಮಂಡಿಸಿದ್ದಾರೆ ಈ ಬಾರಿ ಬಜೆಟ್ ಗಾತ್ರ ಶೇ ೧೫ ರಷ್ಟು ಇಳಿಕೆಯಾಗಿದ್ದು ಪಾಲಿಕೆಯ ಆದಾಯ ಹೆಚ್ಚಿಸಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ

ಪಾಲಿಕೆಯ ಆದಾಯ ಹೆಚ್ಚಿಸಲು ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಎಲ್ಲ ಆಸ್ತಿಗಳನ್ನು ಮರು ಸರ್ವೆ ಮಾಡಲು ಹೊರ ಗುತ್ತಿಗೆ ನೀಡಿ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯುಟಿಕರಣ ಮಾಡಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದೆ

ಜಾಹಿರಾತು ಕರವನ್ನು ಶೇ ೩೦ ರಷ್ಡು ಹೆಚ್ಚಿಸಿ ಒಂದು ಕೋಟಿ ರೂ ಹೆಚ್ಚುವರಿ ಆದಾಯವನ್ನು ನೀರಿಕ್ಷಿಸಲಾಗಿದೆ ಕಟ್ಟಡ ಪರವಾನಿಗೆ ವ್ಯೆವಸ್ಥೆಯನ್ನು ಗಣೀಕೃತಗೊಳಿಸಿ ಬೈಲಾಗಳನ್ನು ತಿದ್ದುಪಡಿ ಮಾಡಿ ಸರಳೀಕರಣಗಳಿಸುವ ಭರವಸೆಯನ್ನು ಬಜೆಟ್ನಲ್ಲಿ ನೀಡಲಾಗಿದೆ

ಬೆಳಗಾವಿ ನಗರದಲ್ಲಿರುವ ಪಾಲಿಕೆಯ ಖುಲ್ಲಾ ಜಾಗೆಗಳನ್ನು ಮಾರಾಟ ಮಾಡಿ ಇದರಿಂದ ೩೦ ಕೋಟಿ ಬಂಡವಾಳ ಆದಾಯವನ್ನು ಹೆಚ್ಚಿಸುವದಾಗಿ ರತನ ಮಾಸೇಕರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ

ನಗರದ ಸ್ವಚ್ಛತೆ ಗೆ ಹೆಚ್ಚಿನ ಅನುದಾನ ಕಾಯ್ದಿರಿದಲಾಗಿದೆ,ಪ್ಲಾಸ್ಟಿಕ್ ನಿಷೇದದ ಪರ್ಯಾಯ ಹಾಗು ಪರಿಸರ ಸ್ನೇಹಿ ವಸ್ತುಗಳ ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಒಂದು ಲಕ್ಷ ರೂ ಅನುದಾನ ಕಾಯ್ದರಿಸಲಾಗಿದೆ

ಪಾಲಿಕೆ ಕಚೇರಿಯ ಕಟ್ಟಡದ ಪಕ್ಕದಲ್ಲಿ ಎನೆಕ್ಸ ಕಟ್ಟಡ ನಿರ್ಮಿಸಲು ಐದು ಕೋಟಿ,ಪಾಲಿಕೆಯ ಖುಲ್ಲಾ ಜಾಗೆಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು, ಶಾಪಿಂಗ್ ಕಾಂಪ್ಲೆಕ್ಸಗಳ ನಿರ್ಮಾಣಕ್ಕಾಗಿ ಹತ್ತು ಕೋಟಿ ಅನುದಾನ ಕಾಯ್ದಿರಿದಲಾಗಿದೆ

ನಗರದಲ್ಲಿ ಸೋಲಾರ ವಿದ್ಯತ್ತದೀಪಗಳ ಅಳವಡಿಕೆಗೆ ೫೦ ಲಕ್ಷ ಅನುದಾನ,ನಗರದ ಬೀದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳಿಗೆ ಅತ್ಯಾಧುನಿಕ ತಳ್ಳುವ ಗಾಡಿಗಳನ್ನು ಪೂರೈಸಲು ಒಂದು ಕೋಟಿ ಅನುದಾನ ಕಾಯ್ದಿರಿಸಲಾಗಿದೆ

ನಗರದಲ್ಲಿ ಬಸ್ ತಂಗುದಾಣ ನಿರ್ಮಿಸಲು ೧ ಕೋಟಿ ನಗರದ ಪ್ರಮುಖ ವೃತ್ತಗಳ ಸೌಂಧರ್ಯಿಕರಣಕ್ಕೆ ೧ ಕೋಟಿ ,ನಾನಾ- ನಾನಿ ಗಾರ್ಡನ್ ಗಳನ್ನು ನಿರ್ಮಿಸಲು ೧ ಕೋಟಿ,,ಕಿಲ್- ಬಿಲ್ ಚಿಣ್ಣರ ಉದ್ಯಾನ ನಿರ್ಮಿಸಲು ೫೦ ಲಕ್ಷ ರೂ ಅನುದಾನ ನೀಡಲಾಗಿದೆ,ಹೊಸ ವಾಹನಗಳ ಖರೀಧಿಗೆ ೨೦ ಲಕ್ಷ ರೂ ಅನುದಾನ ಕಾಯ್ದಿರಿದಲಾಗಿದೆ

ಪಾಲಿಕೆ ನಿಯಮಾವಳಿಗಳ ಪ್ರಕಾರ ಪರಿಸರ ಸ್ನೇಹಿ ಕಟ್ಟಡ ನಿರ್ಮಿಸುವವರಿಗೆ ಶೇ ೧೦ ರಷ್ಟು ತೆರಿಗೆ ವಿನಾಯತಿ,ಜೊತೆಗೆ ಸ್ವಾತಂತ್ರ್ಯ ಯೋಧರಿಗೂ ಶೇ ೧೦ ರಷ್ಟು ಆಸ್ತಿ ತೆರಿಗೆಯಲ್ಲಿ ವಿನಾಯತಿ ನೀಡಲಾಗಿದೆ

೨೦೧೭-೧೮ ನೇ ಸಾಲಿನ ಬಜೆಟ್ ನಲ್ಲಿ ಶೇ ೧೫ ರಷ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದ್ದು ೩೫ ಕೋಟಿ ಹೆಚ್ಚಿನ ಆದಾಯ ನೀರಿಕ್ಷಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ಬಂಡವಾಳ ಹೆಚ್ಚಿಸುವ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು ಉಳಿತಾಯದ ಬಜೆಟ್ ಮಂಡಿಸಲಾಗಿದ್ದು ಇದು ಇಮ್ಯಾಜಿನ್ ಮಾಡಿಕೊಳ್ಳುವ ಬಜೆಟ್ ಅಲ್ಲ ಇದು ಪ್ರಾಕ್ಟಿಕಲ್ ಬಜೆಟ್ ಎಂದು ರತನ ಮಾಸೇಕರ ಅಭಿಪ್ರಾಯ ಮಂಡಿಸಿದ್ದಾರೆ

ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದೀಪಕ ಜಮಖಂಡಿ ಹಳೆಯ ಬಾಟಲಿ ಹೊಸ ನೀರು ಇದ್ದಹಾಗಿದೆ ಹಳೆಯ ಯೋಜನೆಗಳ ಮರು ಘೋಷಣೆಯಾಗಿದೆ ಎಂದು ಟೀಕಿಸಿದರೆ ರಮೇಶ ಸೊಂಟಕ್ಕಿ ಬಜೆಟ್ ಪುಸ್ತಕದ ಕಲರ್ ಮಾತ್ರ ಬದಲಾಗಿದ್ದು ಇದರಲ್ಲಿ ಹೊಸತನ ಇಲ್ಲಚಾಂತ ವ್ಯೆಂಗ್ಯವಾಡಿದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *