ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ.ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,ಉಪಮೇಯರ್ ಸ್ಥಾನ ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಿಡಲಾಗಿದೆ.
ಅಂತು ಇಂತೂ ಪಾಲಿಕೆಯಲ್ಲಿ ನಗರಸೇವಕರ ಪರ್ವ ಶುರುವಾಗಿದ್ದು ಇಬ್ಬರು ಮಹಿಳೆಯರು ಅಧಿಕಾರ ನಡೆಸಲಿದ್ದು ಶೀಘ್ರದಲ್ಲೇ ಮೇಯರ್ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ದಿನಾಂಕ ಪ್ರಕಟವಾಗಲಿದೆ.
ಒಂದು ವರ್ಷದ ಹಿಂದೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು,ಆದ್ರೆ ನಗರ ಸೇವಕರ ಚುನಾವಣೆ ನಡೆಯಲಿಲ್ಲ ಒಂದು ವರ್ಷ ಹಾಗೆಯೇ ಕಳೆದು ಹೋದ ಕಾರಣ ಸರ್ಕಾರ ಈಗ ಹೊಸ ಮೀಸಲಾತಿ ಪ್ರಕಟಿಸಿದ್ದು ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಬಿಜೆಪಿ ಮಹಿಳಾ ನಗರಸೇವಕರಿಗೆ ಅದೃಷ್ಟ ಒಲಿದು ಬಂದಂತಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ