ಬೆಳಗಾವಿ-ಶಹಾಪೂರ ಪ್ರದೇಶದಲ್ಲಿರುವ ಪಿ ಕೆ ಕ್ವಾಟರ್ಸಗೆ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ವೆಂಕಟೇಶ್ ಭೇಟಿ ನೀಡಿ ಅಲ್ಲಿಯ ಶೋಚನೀಯ ಪರಿಸ್ಥಿತಿ ನೋಡಿ ದಂಗಾದರು
ಬೆಳಗಾವಿ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ವಸತಿ ಪ್ರದೇಶ ವಾಸಕ್ಕೆ ಅಯೋಗ್ಯವಾಗಿದೆ ಇಂತಹ ದುಸ್ಥಿತಿಯನ್ನು ನಾನು ರಾಜ್ಯದ ಯಾವ ಜಿಲ್ಲೆಯಲ್ಲಿ ನೋಡಿಲ್ಲ,ಎಂದು ಆಕ್ರೋಶ ವ್ಯೆಕ್ತ ಪಡಿಸಿದ ಆಯೋಗದ ಅಧ್ಯಕ್ಷರು ಪಾಲಿಕೆ,ಹಾಗು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಪಿಕೆ ಕ್ವಾಟರ್ಸನಲ್ಲಿ ವಾಸ ವಾಗಿರುವ ಅನೇಕ ಜನ ವಿಕಲ ಚೇತನರು ಅಸಹಾಯಕರು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಇದೇ ಸಂಧರ್ಭದಲ್ಲಿ ಸ್ಕೇಟಿಂಗ್ ವಿಭಾಗದಲ್ಲಿ ಗಿನ್ನೀಸ್ ದಾಖಲೆ ಮಾಡಿರುವ ವರುಣಾ ವಾಘೆಲಾ ಆಯೋಗದ ಅಧ್ಯಕ್ಷ ರನ್ನು ಭೇಟಿಯಾಗಿ ಸರಕಾರದ ಸಹಾಯಕ್ಕಾಗಿ ಮನವಿ ಮಾಡಿಕೊಂಡರು
ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ವೆಂಕಟೇಶ ಇಂತಹ ಪ್ರತಿಭೆಗಳು ಇಂತಹ ಶೋಚನೀಯ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತುಕೊಂಡು ಆಡಳಿತ ನಡೆಸಿದರೆ ಸಾಲದು ಇಂತಹ ಪ್ರತಿಬೆಗಳನ್ನು ಗುರುತಿಸಿ ಅವರಿಗೆ ಸರಕಾರದ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಬೇಕು.ಸ್ಕೇಟಿಂಗ್ ಪಟು ವರುಣಾ ವಾಘೇಲಾಗೆ ಪಾಲಿಕೆಯ ವತಿಯಿಂದ ಲಕ್ಷ ರೂ ಪ್ರೋತ್ಸಾಹ ಧನ ಕೊಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು
ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ ಸರ್ಕಾರ ನಿವೇಶನ ರಹಿತ ಮತ್ತು ವಸತಿ ರಹಿತ ಪೌರ ಕಾರ್ಮಿಕರಿಗೆ ಸೂರು ಒದಗಿಸುವ ಸಂಕಲ್ಪ ಮಾಡಿದೆ ಇದೇ ತಂಗಳು ೧೩ ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು ಬೆಳಗಾವಿಯ ಪಿಕೆ ಕ್ವಾಟರ್ಸ ಅಭಿವೃದ್ಧಿಯ ಬಗ್ಗೆ ಇದೇ ಸಭೆಯಲ್ಲಿ ಅಂತಿಮ ತೀರ್ಮಾಣ ಕೈಗೊಳ್ಳುತ್ತೇವೆ ಎಂದರು