ಈವರೆಗೂ ಕನ್ನಡದ ಧ್ವಜ ಸುರಕ್ಷಿತ…..!!!!
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿ,ಕನ್ನಡದ ಧ್ವಜ ಹಾರಿಸಿದ ಹೋರಾಟಗಾರರು,ಕೊರೆಯುತ್ತಿರೋ ಚಳಿಯಲ್ಲೇ ಧ್ವಜಸ್ತಂಭ ಬಳಿ ರಾತ್ರಿಯಲ್ಲ ಕಾವಲು ಮಾಡಿದ್ದು ,ಕನ್ನಡದ ಧ್ವಜ ಈ ವರೆಗೂ ಸುರಕ್ಷಿರವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಎದುರು ಅಹೋರಾತ್ರಿ,ಚಳಿಯನ್ನು ಲೆಕ್ಕಿಸದೇ ಧ್ವಜ ವನ್ನು ಕಾವಲು ಮಾಡಿದ್ದಾರೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಗಲೂ ಅಲ್ಲಿಯೇ ಠಿಖಾಣಿ ಹೂಡಿದ್ದಾರೆ. ಕನ್ನಡಪರ ಘೋಷಣೆ ಕೂಗುತ್ತಾ ಧ್ವಜ ಕಂಬದ ಹತ್ತಿರ ಕುಳಿತುಕೊಂಡಿದ್ದಾರೆ.
ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಕಾರ್ಯಕರ್ತರ ಘೋಷಣೆ ಕೂಗುವ ಮೂಲಕ ಕಾವಲು ಕಾರ್ಯವನ್ನು ಮುಂದುವರೆಸಿದ್ದಾರೆ.
ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ್ ನೇತೃತ್ವದಲ್ಲಿ ಕನ್ನಡ ಧ್ವಜ ಹಾರಿಸಲಾಗಿದ್ದು,
ಇಂದು 10 ಗಂಟೆಗೆ ಜಿಲ್ಲಾಧಿಕಾರಿಗಳು ಕನ್ನಡ ಸಂಘಟನೆಗಳ ಸಭೆ ಕರೆದಿದ್ದಾರೆ.
ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಸಭೆಗೆ ಹೋಗದಿರಲು ಕನ್ನಡ ಧ್ವಜ ಕಾಯುತ್ತಿರುವ ಹೋರಾಟಗಾರರು ನಿರ್ಧಾರಿಸಿದ್ದು , ಕನ್ನಡ ಧ್ವಜಸ್ತಂಭಕ್ಕೆ ರಕ್ಷಣೆ ಬಗ್ಗೆ ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಅಲ್ಲಿಯವರೆಗೂ ಜಾಗೆ ಬಿಟ್ಟು ಎಲ್ಲಿಯೂ ಹೋಗದಿರಲು ,ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ನಿರ್ಧರಿಸಿದ್ದಾರೆ.
ಮಹಾನಗರ ಪಾಲಿಕೆ ಎದುರು ಕನ್ನಡಧ್ವಜ ಹಾರಿಸೋವರೆಗೂ ಪಾದರಕ್ಷೆ ತೊಡಲ್ಲ ಎಂದು ಶಪಥ ಮಾಡಿದ್ದ ಕಸ್ತೂರಿ ಭಾವಿ ನಿನ್ನೆ,
ನಿನ್ನೆ ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಕಸ್ತೂರಿ ಭಾವಿಗೆ ಹೊಸ ಪಾದರಕ್ಷೆ ನೀಡಿ ಸನ್ಮಾನಿಸಿದ್ದ ಕನ್ನಡಪರ ಸಂಘಟನೆಗಳು