ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಸಮಯ ಪ್ರದ್ಞೆ ಎನ್ನುವದೇ ಇಲ್ಲ ಪ್ರತಿ ಸಲ ಒಂದೂವರೆ ಘಂಟೆ ತಡವಾಗಿ ಆರಂಭವಾಗುವ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪಂಡರಿ ಪರಬ ತಳ ಬುಡ ಇಲ್ಲದೇ ಘಂಟೆಗಟ್ಟಲೇ ಭಾಷಣ ಬಿಗಿಯುತ್ತಾರೆ ಅವರು ಪಾಲಿಕೆ ಸಭೆಯಲ್ಲಿ ಮಾತನಾಡಲು ಎದ್ದರೇ ಎಲ್ಲರೂ ತೆಲೆ ಹಿಡಿದುಕೊಳ್ಳುತ್ತಾರೆ
ಯಾವದೇ ವಿಷಯ ಪ್ರಾಸ್ತಾಪ ಆಗಲಿ ಪಂಡರಿ ಪರಬ ಎದ್ದು ನಿಲ್ಲುತ್ತಾರೆ ಘಂಟೆಗಟ್ಟಲೇ ಭಾಷಣ ಬಿಗಿಯುತ್ತಾರೆ ಪಂಡರಿ ಪರಬ ಅವರು ಎಲ್ಲರಿಗೂ ಬೋರ್ ಆಗಿದೆ ಪಾಲಿಕೆ ಸಭೆ ತಡವಾಗಿ ಆರಂಭವಾಗುತ್ತದೆ ಅದರಲ್ಲಯೂ ಪಂಡರಿ ಪರಬ ಅವರ ತಡ ಬುಡ ಇಲ್ಲದ ಮಾತುಗಳಿಂದ ಎಲ್ಲರಿಗೂ ಕಿರಿಕಿರಿಯಾಗಿಬಿಟ್ಟಿದೆ
ಪಂಡರಿ ಪರಬ ಅವರಿಗೆ ಲಗಾಮು ಹಾಕಬೇಕು ಅವರ ಭಾಷಣಕ್ಕೆ ಮಿತಿ ಇರಬೇಕು ಮಹಾಪೌರರು ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಯಾವುದೇ ವಿಷಯ ಪ್ರಸ್ತಾಪ ಆದಾಗ ನಿರ್ಧಿಷ್ಟವಾಗಿ ಮಾತನಾಡಬೇಕು ಕಥೆ ಹೇಳುವ ಪರಿಪಾಠ ನಿಲ್ಲಬೇಕು ಎಂದು ಎಲ್ಲ ನಗರ ಸೇವಕರ ಒತ್ತಾಯ ಇದೆ ಆದರೆ ಪಂಡರಿ ಪರಬ ಅವರನ್ನು ನೇರವಾಗಿ ಪ್ರಶ್ನಿಸುತ್ತಿಲ್ಲ ಅಷ್ಟೆ ಮುಂದಿನ ದಿನಗಳಲ್ಲಿ ಪಂಡರಿ ಪರಬ ಅವರ ಭಾಷಣದ ಮೇಲೆಯೇ ಚರ್ಚೆ ನಡೆದರೆ ಅಚ್ಚರಿ ಪಡಬೇಕಾಗಿಲ್ಲ