ಬೆಳಗಾವಿ-ಬೆಳಗಾವಿ ನಗರದ 1200 ವಿಧ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದು ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಒಮ್ಮತದ ನಿದಾರವನ್ನು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಯಿತು
ಸಭೆಯಲ್ಲಿ ಮಹಾಪೌರ ಸರೀತಾ ಪಾಟೀಲ ಊಪ ಮಹಾಪೌರ ಸಂಜಯ ಶಿಂಧೆ ಸಮೀತಿಯ ಅಧ್ಯಕ್ಷೆ ರೂಪಾ ನೇಸರಕರ ಸೇರಿದಂತೆ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು
ಸ್ಕಾಲರ್ ಶಿಪ್‍ಗಾಗಿ 1200 ಜನ ವಿಧ್ಯಾರ್ಥಿಗಳು ಅರ್ಜಿಸಲ್ಲಿಸಿದ್ದಾರೆ ಆದರೆ ಕೇವಲ 17 ಲಕ್ಷ ರೂ ಅನುದಾನ ಇದ್ದು ಎಲ್ಲ ವಿಧ್ಯಾರ್ಥಿಗಳಿಗೆ ಅನುದಾನ ಸಾಕಾಗುವದಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸು ನಿಧಾರವನ್ನು ಕೈಗೊಳ್ಳಲಾಯಿತು.
ಪರಶಿಷ್ಠ ಜಾತಿ ಪರಶಿಷ್ಟ ಪಂಗಡಕ್ಕಾಗಿ 3ಕೋಟಿ 31 ಲಕ್ಷ ರು ಅನುದಾನ ಇದ್ದು ಶೇ 40 ರಷ್ಟು ಅನುದಾನವನ್ನು ಸಮಾಜದ ಅಭಿವೃದ್ಧಿಗಾಗಿ ಶೇ 60 ರಷ್ಟು ಅನುದಾನವನ್ನು ವಯಕ್ತಿಕ ಲಾಭಕ್ಕಾಗಿ ಬಳಿಸುವ ನಿರ್ಧಾರ ಕೈಗೊಳ್ಳಲಾಯಿತು
ಜೊತೆಗೆ ಎಲ್ ಪಿ ಜಿ ಗ್ಯಾಸ್ ವಿತರಣೆÉ ಹಾಗು ಸ್ವ ಉದ್ಯೋಗಕ್ಕಾಗಿ 52 ಲಕ್ಷ ರೂ ಅನುದಾನವಿದ್ದು ಅರ್ಹ ಫಲಾನುಭವಿಗಳಿಗೆ ವಿತರಿಸುವ ನಿರ್ಣಯ ಕೈಗೊಳ್ಳಲಾಯಿತು
ಈ ಸಂದರ್ಭದಲ್ಲಿ ಸಮೀತಿಯ ಸದಸ್ಯರು ಫಲಾನುಭವಿಗಳು ನಗರ ಸೇವಕರ ಶಿಫಾರಸು ಪತ್ರ ಪಡೆಯುವದು ಕಡ್ಡಾಯ ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಒತ್ತಾಯಿಸಿದಾಗ ಅದಕ್ಕೆ ಅಧಿಕಾರಿಗಳು ನಿರಾಕರಿಸಿದರು ಇದು ಸಕಾರದ ನೀತಿ ನಿಯಮಾವಳಿಗಳಲ್ಲಿ ಬರುವದಿಲ್ಲ ಈ ರೀತಿಯ ನಿಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …