ಬೆಳಗಾವಿ- ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪ ಮಾಡಿ ಅಂಗಡಿಗೆ ಬಂದ ೬೭ ವರ್ಷ ವಯಸ್ಸಿನ ಮುದುಕಿಯೊಬ್ಬಳು ಎರಡುವರೆ ತೊಲೆ ಬಂಗಾರದ ಸರವನ್ನು ದೋಚಲು ಹೋಗಿ ಅಂಗಡೀಕಾರನ ಕೈಗೆ ಸಿಕ್ಕಿಬಿದ್ದ ಘಟನೆ ಬೆಳಗಾವಿ ನಗರದ ಕಾಕತೀವೇಸ್ ನಲ್ಲಿರುವ ಚಿನ್ನದ ಅಂಗಡಿಯಲ್ಲಿ ನಡೆದಿದೆ
ಮಹಾರಾಷ್ಟ್ರ ಪೂನೆ ಮೂಲದವಳಾದ ಸುಭದ್ರಾ ಚವ್ಹಾಣ ಎಂಬ ಮಹಿಳೆ ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಸಾಳೆ ವೃದ್ಧೆ ಕಳ್ಳಿಯನ್ನು ಸಾರ್ವಜನಿಕರು ಸಿಸಿಟಿವಿ ಪೋಟೇಜ್ ಸಮೇತ ಖಡೇ ಬಝಾರ ಪೋಲೀಸರಿಗೆ ಒಪ್ಪಿಸಿದ್ದಾರೆ
ಚಿನ್ನ ಖರೀದಿಸುವ ನೆಪದಲ್ಲಿ ಹತ್ತು ಹಲವು ಚಿನ್ನದ ಸರಗಳನ್ನು ನೋಡಿದ ಈ ಕಳ್ಳಿ ೨೫ ಗ್ರಾಂ ತೂಕದ ಚಿನ್ನದ ಸರವನ್ನು ಬಚ್ಚಿಟ್ಟು ಅಂಗಡಿಯಿಂದ ಪರಾರಿಯಾಗುವ ಸಂಧರ್ಭದಲ್ಲಿ ಅಂಗಡಿಯ ಸೇಲ್ಸಮನ್ ಕಳ್ಳಿಯನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಸಫಲನಾಗಿದ್ದಾನೆ
ಈ ಮುದುಕಿ ಚಿನ್ನ ಕದಿಯುವದಕ್ಕಾಗಿಯೇ ಮಹಾರಾಷ್ಟದ ಪೂನೆಯಿಂದ ಬೆಳಗಾವಿಗೆ ಬಂದಿದ್ದಳು ಎನ್ನಲಾಗಿದೆ ಖಡೇ ಬಝಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ