Breaking News

ರಾಹುಲ್ ಕುರಿತು ಪ್ರತಾಪ ಸಿಂಹ ಲೇವಡಿ

ಬೆಳಗಾವಿ:
ನೋಟು ನಿಷೇಧ ಮಾಡಿದ್ದ ಆರಂಭದ ದಿನಗಳಲ್ಲಿ ಜನಸಾಮಾನ್ಯರಲ್ಲಿ ಇದ್ದ ಅನುಮಾನ ಆತಂಕಗಳು ಈ 60 ದಿನಗಳಲ್ಲಿ ದೂರವಾಗಿವೆ. ನೋಟು ನಿಷೇಧದಿಂದ ಆಗಿರುವ ತೊಂದರೆಗಳನ್ನು ಸಹಿಸಿಕೊಂಡು ಈ ದೇಶದ ಜನಸಾಮಾನ್ಯರು ಸಹಕರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೋಟು ನಿಷೇಧ ಮಾಡಿದ ಆರಂಭದಲ್ಲಿ ಎಟಿಎಂ ಮುಂದೆ ನಿಂತು 4 ಸಾವಿರ ರೂ. ಪಡೆದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೆ ಬ್ಯಾಂಕ್ ಮತ್ತು ಎಟಿಎಂ ಮುಂದೆ ಕಂಡು ಬಂದಿಲ್ಲ. ಈಗ ಹೊಸ ವರ್ಷದಲ್ಲಿ ಅವರು ಹೊರ ದೇಶಕ್ಕೆ ಹೋಗಿದ್ದಾರೆ. 4 ಸಾವಿರ ರೂ.ಗಳಲ್ಲಿ ರಾಹುಲ್ ಗಾಂಧಿ ಅವರು ಇಷ್ಟು ಸರಳ ಜೀವನ ನಡೆಸಬಹುದಾದರೆ ದೇಶದ ಜನಸಾಮಾನ್ಯರಿಗೆ ಏನು ತೊಂದರೆ ಎಂಧರ4.
ಹಣವನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳದೇ ನೇರವಾಗಿ ರೈತರಿಗೆ ಕೊಡಬೇಕು. ಈಗ ಬಿಡುಗಡೆ ಆಗಿರುವ ಹಣ ವಿತರಣೆ ಮಾಡಿದ ನಂತರ ಇನ್ನು ಹೆಚ್ಚಿನ ಅನುದಾನ ಬೇಕಾಗಿದ್ದರೆ ನಾವೇಲ್ಲ ಪಕ್ಷ ಬೇಧ ಮರೆತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರಧಾನಿಗಳನ್ನು ಭೇಟಿ ಮಾಡಿ ಮನವಿ ಮಾಡಲು ಸಿದ್ದರಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುವದನ್ನು ಬಿಡಬೇಕು. ಕೇಂದ್ರ ಸರಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು 1785 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 50 ದಿನಗಳಲ್ಲಿ ದೇಶದ ಯಾವುದೆ ಮೂಲೆಯಲ್ಲಿ ಜನಸಾಮಾನ್ಯರು ಪ್ರತಿಭಟನೆ ನಡೆಸಿಲ್ಲ. ದಂಗೆ ಎದ್ದಿಲ್ಲ. ಆದರೆ, ಕಾಂಗ್ರೆಸ್‍ನವರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದೆ ಅಚ್ಚರಿ ಮೂಡಿಸಿದೆ ಎಂದರು.
ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯಲು ಹಾಗೂ ವಿದ್ಯುತ್ ಖರೀದಿಸಲು ಇಂದನ ಸಚಿವ ಡಿ.ಕೆ.ಶಿವಕುಮಾರ ಅವರು ನಮ್ಮ ಸಹಾಐ ಕೇಳಿದ್ದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಈಗ ಮಹಾರಾಷ್ಟ್ರದಿಂದ ಕಲ್ಲಿದ್ದಲು ಸಿಗುತ್ತಿದೆ ಎಂದ ಅವರು, ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಕೆಲಸಗಳನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂಬುದನ್ನು ನಮ್ಮಿಂದ ಅಲ್ಲದಿದ್ದರೂ ಡಿ.ಕೆ.ಶಿವಕುಮಾರ ಅವರಿಂದ ಕಲಿಯಲಿ ಎಂದು ಸಲಹೆ ನೀಡಿದರು.
ಸಂಸದ ಸುರೇಶ ಅಂಗಡಿ, ಪಕ್ಷದ ಜಿಲ್ಲಾಧ್ಯಕ್ಷ ಶಾಸಕ ವಿ.ಐ.ಪಾಟೀಲ, ಮಹಾನಗರ ಅಧ್ಯಕ್ಷ ನಿಲ ಬೆನಕೆ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಫೋಟೊ 11

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.