ಬೆಳಗಾವಿ- ಬೆಳಗಾವಿಯಲ್ಲಿ ಐಪಿಎಲ್ ಶೆಕೆ ಶುರುವಾಗಿದೆ,ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿಯೇ ನಡೆದಿದ್ದು ಬೆಳಗಾವಿ ಪೋಲೀಸರು ಬೆಟ್ಟಿಂಗ್ ಜಾಲವನ್ನು ಪತ್ತೆ ಮಾಡಿದ್ದಾರೆ.
ಬೆಳಗಾವಿಯ ಖಡೇಬಝಾರ್ ಪೋಲೀಸರು ಇಂದು ಬೆಳಗಾವಿಯಲ್ಲಿ ದಾಳಿ ಮಾಡಿ ಬೆಟ್ಟಿಂಗ್ ಜಾಲವನ್ನು ಆಪರೇಟ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಮೋಬೈಲ್ ಸೇರಿದಂತೆ ನಾಲ್ವರು ಐಪಿಎಲ್ ಬೆಟ್ಟಿಂಗ್ ಹಿರೋಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಖಡಕ್ ಗಲ್ಲಿಯ ಉತ್ಸವ ಪ್ರಮೋದ್ ಜಾದವ,ಖಂಜರಗಲ್ಲಿಯ ಶಕೀಲ ಶಹಾಪೂರವಾಲೆ,ಮತ್ತು ಅಮೀರ ಮುಲ್ಲಾ,ಚಾಂದೂ ಗಲ್ಲಿಯ,ಮುಜವರ್ ಚಾಂದವಾಲೆ,ಒಟ್ಟು ನಾಲ್ಕು ಜನರನ್ನು ಬಂಧಿಸಿ,ಮೋಬೈಲ್ ಹಾಗೂ 15 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಖಡೇಬಝಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ