ಬೆಳಗಾವಿ-ಹಿಂಡಲಗಾ- ಸುಳಗಾ ರಸ್ತೆಯಲ್ಲಿರುವ ಅಂಬಿಕಾ ಲಾಡ್ಜ್ ಆ್ಯಂಡ್ ಬೋರ್ಡಿಂಗ್ ಮೇಲೆ ದಾಳಿ ಮಾಡಿರುವ ಮಹಿಳಾ ಠಾಣೆಯ ಪೋಲೀಸರು,ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಮಹಿಳಾ ಠಾಣೆಯ ಪಿಐ ಶ್ರೀದೇವಿ ಪಾಟೀಲ ನೇತ್ರತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಅಂಬಿಕಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿ,ಹಲವಾರು ಜನ ನೊಂದ, ಯುವತಿಯರ,ಮಹಿಳೆಯರ ರಕ್ಷಣೆ ಮಾಡಿದ್ದಾರೆ.
ದಾಳಿ ಮಾಡಿರುವ ಪೋಲೀಸರು,1) ಸೋಮನಾಥ ಗವಳಿ ಸಾ.ಬೆಳಗಾವಿಯ ಗವಳಿಗಲ್ಲಿ
2) ರಾಹುಲ್ ಪಾಟೀಲ ಶಿವಾಜಿಗಲ್ಲಿ ಕಂಗ್ರಾಳಿ ಕೆ.ಹೆಚ್
3) ರಮೇಶ್ ತಾರಿಹಾಳ ಸಾ.ಮಾರಿಹಾಳ
4) ಮಯೂರ ಪಾಟೀಲ ಸಾ.ಕಂಗ್ರಾಳಿ ಕೆ.ಹೆಚ್ ಇವರನ್ನು ಬಂಧಿಸಿದ್ದು ಬೆಳಗಾವಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ