ಬೆಳಗಾವಿ- ಬೆಳಗಾವಿ ನಗರದ ಹೃದಯಭಾಗದಲ್ಲಿ ಇರುವ ಕಿಲ್ಲಾ ಕೆರೆಯಲ್ಲಿ ಸಾರ್ವಜನಿಕರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಜೀವದ ಹಂಗ ತೊರೆದು ರಕ್ಷಿಸಿದ ಟ್ರಾಫಿಕ್ ಪೋಲೀಸ್ ಗೆ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಐದು ಸಾವಿರ ರೂ ಬಹುಮಾನ ಘೋಷಿಸಿದ್ದಾರೆ.
ಐದು ಸಾವಿರ ರೂ ಬಹುಮಾನ ಘೋಷಣೆ ಮಾಡುವದರ ಜೊತೆಗೆ ರಕ್ಷಕನಿಗೆ ಮುಖ್ಯಮಂತ್ರಿಗಳ ಪದಕ ನೀಡುವಂತೆ ಶಿಫಾರಸ್ಸು ಮಾಡಲಾಗುವದು ಎಂದು ನಗರ ಪೋಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಂಜೆ ಬೆಳಗಾವಿಯ ಕೋಟೆ ಕೆರೆಯಲ್ಲಿ ಆತ್ಮಹತ್ಯೆಗೆ ಮಹಿಳೆಯೊಬ್ಬಳು ಯತ್ನಿಸಿದಾಗ ಬೆಳಗಾವಿಯ ಟ್ರಾಫಿಕ್ ಪೋಲೀಸ್ ಜನರ ಚೀರಾಟ ಕೂಗಾಟ ಕೇಳಿ,ತಕ್ಷಣ ಅಲ್ಲಿಗೆ ಧಾವಿಸಿ ಕೆರೆಗೆ ಜಂಪ್ ಮಾಡಿ,ನೀರಿನಲ್ಲಿ ಮುಳುಗುತ್ತಿದ್ದ ಆ ಮಹಿಳೆಯನ್ನು ರಕ್ಷಿಸಿದ ಘಟನೆ ನಡೆದಿತ್ತು,ಈ ಟ್ರಾಫಿಕ್ ಪೋಲೀಸನ ಸಹಾಸ ಅಲ್ಲಿದ್ದ ಸಾರ್ವಜನಿಕರ ಮೋಬೈಲ್ ಗಳಲ್ಲಿ ಚಿತ್ರೀಕರಣ ಆಗಿತ್ತು, ಈ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಟ್ರಾಫಿಕ್ ಪೋಲೀಸ್ ಕಾಶಿನಾಥ ಇರಗಾರ ಅವರ ಸಹಾಸಕ್ಕೆ ಅಪಾರ ಜನಮೆಚ್ಚುಗೆ ವ್ಯಕ್ತವಾಗಿವೆ.
ಬೆಳಗಾವಿ ಮೂಲದ ಮಹಿಳೆ ಬೈಲಹೊಂಗಲ ತಾಲ್ಲೂಕಿ ಹಳ್ಳಿಯೊಂದರಲ್ಲಿ ಗಂಡನ ಜೊತೆ ಜಗಳಾಡಿ, ಬೆಳಗಾವಿಯ ತವರು ಮನೆಗೆ ಬಂದಿದ್ದಳು, ಇವತ್ತು ಮತ್ತೆ ಗಂಡ ಹೆಂಡತಿಯ ನಡುವೆ ಮೋಬೈಲ್ ನಲ್ಲಿ ವಾಗ್ವಾದ ಆಗಿದೆ.ಹೀಗಾಗಿ ಈ ಮಹಿಳೆ ಇವತ್ತು ಕಿಲ್ಲಾ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ ಟ್ರಾಫಿಕ್ ಪೋಲೀಸ್ ಈ ಮಹಿಳೆಯನ್ನು ರಕ್ಷಿಸಿದ್ದಾನೆ.