ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಈ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ರೋಗಿಗಳ ಮನರಂಜನೆಗಾಗಿ ಬಿಎಸ್ಎನ್ಎಲ್ ನಾಳೆ ಬುಧವಾರದಿಂದ ವೈಫೈ ಸೇವೆ ಆರಂಭವಾಗಲಿದೆ
ಬುಧವಾರ ಬೆಳಿಗ್ಗೆ ೧೧ ಘಂಟೆಗೆ ಬಿಎಸ್ಎನ್ಎಲ್ ಜಿಲ್ಲಾ ಮುಖ್ಯ ವ್ಯೆವಸ್ಥಾಪಕ ತ್ಯಾಗಿ ಅವರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈಫೈ ಸೇವೆಗೆ ಚಾಲನೆ ನೀಡಲಿದ್ದಾರೆ
ಏಸಿಯಾ ಖಂಡದಲ್ಲಿಯೇ ಸ್ವಚ್ಛ ಮತ್ತು ಬೃಹತ್ತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾವ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಮೋಬೈಲ್ ನೆಟವರ್ಕ ಬರುವದಿಲ್ಲ ಆದರೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಈಗ ವೈಫೈ ಸೇವೆ ಆರಂಭವಾಗಿದೆ
ಬೆಳಗಾವಿ ಜಿಲ್ಲಾ ಆಸ್ಪತ್ರೆ ಗಲೀಜಾಗಿದೆ ಸ್ವಚ್ಛತೆ ಬಗ್ಗೆ ಇಲ್ಲಿಯ ಅಧಿಕಾರಿಗಳು ಯಾವತ್ತೂ ತೆಲೆ ಕೆಡಿಸಿಕೊಂಡಿಲ್ಲ ಮೆಲೆಲ್ಲ ಹೊಳಪು ಒಳಗೆಲ್ಲ ವ್ಯೆವಸ್ಥೆ ಕೊಳಕಾಗಿದ್ದರೂ ರೋಗಿಗಳು ಮಾತ್ರ ಉಚಿತ ವೈ ಫೈ ಬಳಿಸಿ ಎಂಜಾಯ್ ಮಾಡಬಹುದಾಗಿದೆ
ಡಾಕ್ಟರ್ ಸಾಹೇಬರು ನಿಗದಿತ ಸಮಯದಲ್ಲಿ ಆಸ್ಪತ್ರೆಯಲ್ಲಿ ಕಾಣಿಸಿ ಕೊಳ್ಳದಿದ್ದರೂ ಆಸ್ಪತ್ರೆಯಲ್ಲಿ ಇನ್ನು ಮುಂದೆ ದಿನನಿತ್ಯ ವೈಫೈ ನೆಟವರ್ಕ ಲಭ್ಯವಾಗಲಿದೆ
ಡಾಕ್ಟರ್ ಬರಲಿಲ್ಲ ಇಂಜಕ್ಷನ್ ಮಾಡಲಿಲ್ಲ ನರ್ಸಗಳು ಔಷದಿ ಕೊಡಲಿಲ್ಲ ಅಂತ ಆಸ್ಪತ್ರೆಯಲ್ಲಿ ರೋಗಿಗಳು ಇನ್ನು ಮುಂದೆ ಟೆನಶನ್ ಹೆಚ್ಚಿಸಿಕೊಳ್ಳದೇ ವೈಫೈ ಆನ್ ಮಾಡಿ ಎಂಜಾಯ್ ಮಾಡಬಹುದು
ಕೆಎಲ್ಇ ಆಸ್ಪತ್ರೆಯಲ್ಲಿಯೂ ವೈಫೈ ಆರಂಭವಾದಲ್ಲಿ ಅಲ್ಲಿಯ ರೋಗಿಗಳು ಖುಷಿ ಪಡಬಹುದು
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …