Breaking News

26 ಕ್ಕೆ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ನಿಂದ ಲಕ್ಷ್ಮಣ ರೇಖೆ….!!!

ಬೆಳಗಾವಿ-ಕಳೆದ ವಿಧಾನಾಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಪರಾಭವಗೊಂಡು,ರಾಜಕೀಯ ಹಿನ್ನಡೆ ಅನುಭವಿಸಿದ್ದ ಲಕ್ಷ್ಮಣ ಸವದಿ ಅವರು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ರಾತ್ರೋ ರಾತ್ರಿ ಜಾಕ್ ಪಾಟ್ ಹೊಡೆದು ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದು ಸವದಿ ಅವರ ರಾಜಕೀಯ ಪುನರ್ಜನ್ಮ ಅಂತಾ ಎಲ್ಲರೂ ವಿಶ್ಲೇಷಣೆ ಮಾಡಿದ್ದರು.

ಈಗ ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ‌.ಜುಲೈ 26 ಕ್ಕೆ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿಯ ಕೆಲವು ನಾಯಕರು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರು ? ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಈ ಕುರಿತು ದೃಶ್ಯಮಾದ್ಯಮಗಳಲ್ಲಿ ಕ್ಷಣಕ್ಕೊಂದು ಬ್ರೇಕಿಂಗ್ ಸುದ್ಧಿ ಪ್ರಕಟವಾಗುತ್ತಿದೆ.

ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ‌.ಆದ್ರೆ ಅವರ ಅಧಿಕಾರದ ಅವಧಿ ಜುಲೈ 26 ರರವೆಗೆ ಮಾತ್ರ ಎನ್ನುವ ಸುದ್ಧಿ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಮುಟ್ಟಿದೆ.

ಯಡಿಯೂರಪ್ಪ ಅವರ ಸ್ಥಾನ ತುಂಬಲು ಯಾರು ಸಮರ್ಥ ಎನ್ನುವ ಚಿಂತನೆ ಈಗ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಗಂಭೀರವಾಗಿ ನಡೆದಿದೆ.ಈ ಕುರಿತು ಬಿಜೆಪಿ ವರಿಷ್ಠರು ಏನು ಮಾಡಿದ್ರೆ ಏನಾಗಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರು‌.? ಅವರ ಹೆಸರು ಇನ್ನೂ ನಿಗೂಢವಾಗಿದೆ‌‌.

ಸಿಎಂ ಬದಲಾಗುವ ಸಮಯ ಹೊಸ್ತಿಲಲ್ಲಿ ಇರುವಾಗ,ಯಡಿಯೂರಪ್ಪ ಅವರ ಪರವಾಗಿ,ರಾಜ್ಯದ ಕೆಲವು ಮಠಾಧೀಶರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ‌. ಯಡಿಯೂರಪ್ಪ ಅವರನ್ನು ಬದಲಾಯಿಸಿದ್ರೆ ಇದರ ಲಾಭ ಕಾಂಗ್ರೆಸ್ಸಿಗೆ ಆಗುತ್ತದೆ.ಅವರ ಜೊತೆ ಸರಿಯಾಗಿ ನಡೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರೇ ಬಿಜೆಪಿ ಹೈಕಮಾಂಡ್ ಗೆ ಸಲಹೆ ಕೊಡುವ ಪರಿಸ್ಥಿತಿಯೂ ಈ ರಾಜ್ಯದಲ್ಲಿ ಎದುರಾಗಿದೆ‌.

ದೃಶ್ಯ ಮಾದ್ಯಮಗಳಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎನ್ನುವ ಡಿಬೇಟ್ ನಡೆಯುತ್ತಿದೆ. ಈ ಡಿಬೇಟ್ ನಲ್ಲಿ ಪ್ರಲ್ಹಾದ್ ಜೋಶಿ,ಸಿಟಿ ರವಿ,ಅಶ್ವತ್ಥ ನಾರಾಯಣ,ಬಸವರಾಜ್ ಬೊಮ್ಮಾಯಿ,ಅರವಿಂದ್ ಬೆಲ್ಲದ ಅವರ ಹೆಸರು ಚರ್ಚೆಗೆ ಬಂದಿದೆ. ಆದ್ರೆ ಕೆಲವರು ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ‌.

ಸಚಿವ ಉಮೇಶ್ ಕತ್ತಿ ಅವರೂ ನಾನು ಸೀನಿಯರ್, ಕಳಂಕ ರಹಿತ ಲೀಡರ್ ಸಿಎಂ ಬದಲಾದ್ರೆ ನನ್ನ ನಂಬರ್ ಬರುತ್ತದೆ‌.ಅಂತಾ ಬಾಂಬ್ ಸಿಡಿಸಿದ್ದಾರೆ.ಒಟ್ಟಾರೆ ಮುಂದಿನ ಸಿಎಂ ವಿಚಾರ ಈಗ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ‌.

ಮುಂದಿನ ಸಿಎಂ ಯಾರು ? ಎನ್ನುವ ವಿಚಾರದಲ್ಲಿ RSS ಮುಖಂಡರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.ಈ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಇಟ್ಟಿದ್ದಾರೆ.ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆ,ವಿಶ್ಲೇಷಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ,ಬಿಜೆಪಿ ಹೈಕಮಾಂಡ್ ಒಬ್ಬರ ಹೆಸರನ್ನು ಈಗಾಗಲೇ ಫೈನಲ್ ಮಾಡಿದೆ.ಹೆಸರು ಘೋಷಣೆಯಾದ ಬಳಿಕ,ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗದಂತೆ ತಯಾರಿ ಮಾಡಿಕೊಳ್ಳುತ್ತಿದೆ.ಯಡಿಯೂರಪ್ಪ ಬದಲಾದ ಮೇಲೆ ಆಗಬಹುದಾದ ನಷ್ಟವನ್ನು ಭರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುನ್ನೆಚ್ಚರಿಕೆ ವಹಿಸುತ್ತಿದೆ .ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಈ ಬಾರಿ ಬೆಳಗಾವಿ ಜಿಲ್ಲೆಗೆ ಸಿಎಂ ಸ್ಣಾನ ಒಲಿದು ಬರಲಿದೆ ಎನ್ನುವ ಸುದ್ಧಿಯೂ ಗಪ್ ಚುಪ್ ಹರದಾಡುತ್ತಿದೆ‌. ಲಕ್ಷ್ಮಣ ಸವದಿ ಜಾಕ್ ಪಾಟ್ ಹೊಡೆಯುತ್ತಾರೆ ಎನ್ನುವ ಬಂಪರ್ ಸುದ್ಧಿಯೂ ಪ್ರಚಾರದಲ್ಲಿದೆ. ಆದ್ರೆ ಯಡಿಯೂರಪ್ಪ ಬದಲಾವಣೆ ಮಾಡಬಾರದು ಎಂದು 17 ಜನ ವಲಸೆ ಶಾಸಕರು ಪಟ್ಟು ಹಿಡಿದಿದ್ದಾರೆ.ಯಡಿಯೂರಪ್ಪ ಬದಲಾದ್ರೆ ಬೆಂಬಲ ವಾಪಸ್ ಎನ್ನುವ ಎಚ್ಚರಿಕೆಯನ್ನು 17 ಜನ ಶಾಸಕರ ತಂಡ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿಗೆ ವಲಸೆ ಬಂದಿರುವ ಶಾಸಕರನ್ನು ಮನವೊಲಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.

ಜುಲೈ 26 ರ ಬಳಿಕೆ ಯಡಿಯೂರಪ್ಪ ಬದಲಾದ್ರೆ,ರಾಜ್ಯ ರಾಜಕಾರಣ ನಕ್ಷೆಯೂ ಬದಲಾಗುತ್ತದೆ.ಗುಡಿಸಲಲ್ಲಿ ಒಂಟೆ ಹೊಕ್ಕಿದ ಬಳಿಕ ಆಗುವ ಚಿಂದಿ ಚಿತ್ರಾಣ್ಣದ ಚಿತ್ರಣ ಗೋಚರವಾಗುತ್ತದೆ.

ಜುಲೈ 26 ಕ್ಕೆ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಹತ್ವದ ನಿರ್ಧಾರ  ಕೈಗೊಂಡು ಭಿನ್ನಮತ ಎದುರಾಗದಂತೆ ಲಕ್ಷ್ಮಣ ರೇಖೆ ಎಳೆಯುವ ಸಾಧ್ಯತೆ ಇದೆ.

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.