ಬೆಳಗಾವಿ ಕುಂದಾನಗರಿ ಬೆಳಗಾವಿಯಲ್ಲಿ ಮೊನ್ನೆ ನಡೆದಿದ್ದ ಕೋಮು ಗಲಭೆ ಸದ್ಯ ನಿಯಂತ್ರಣಕ್ಕೆ ಬಂದಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಬೀಗಿ ಪೊಲೀಸ್ ಭದ್ರತೆ ಮುಂದೊರೆದಿದ್ದು, ನಿನ್ನೆ ಸಂಜೆ ಪೊಲೀಸ್ರು ಗಲಭೆ ಪೀಡಿತ ಪ್ರದೇಶದಲ್ಲಿ ಏಕಾಏಕಿ ದಾಳಿ ನಡೆಸಿ ಗಲಾಟೆ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲು ಮತ್ತು ಗಾಜಿ ಬಾಟಲಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ
ಡಿಸಿಪಿಗಳಾದ ಸೀಮಾ ಲಾಟಕರ್ ಮತ್ತು ಅಮರನಾಥ ರೆಡ್ಡಿ ನೇತೃತ್ವದಲ್ಲಿ ಆರು ಪ್ರತ್ಯೇಕ ಅಧಿಕಾರಿಗಳ ತಂಡವು ಗಲಭೆ ಪೀಡಿತ ಪ್ರದೇಶದ ಪ್ರತಿಯೊಂದು ಮನೆಯಲ್ಲಿ ಪರಿಶೀಲನೆ ನಡೆಸಿದ್ರು. ಮನೆಯ ಮೇಲ್ಛಾವಣಿಯಲ್ಲಿ, ಗಾರ್ಡ್ ಏರಿಯಾದಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲುಗಳು ಮತ್ತು ಗಾಜಿ ಬಾಟಲಿಗಳನ್ನ ಸಂಗ್ರಹಿಸಿ, ಆಯಾ ಮನೆಯ ವಿವರವನ್ನ ಪಡೆದುಕೊಂಡು ಕೇಸ್ ದಾಖಲಿಸಲು ಮಂದಾಗಿದ್ದಾರೆ.
ಗಲಾಟೆ ಮಾಡಲೆಂದು ಕೀಡಗೇಡಿಗಳು ಮನೆಯಲ್ಲಿ ಕಲ್ಲು ಮತ್ತು ಬಾಟಲಿಗಳನ್ನ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ರು ಈ ದಾಳಿ ನಡೆಸಿದ್ದಾರೆ. ಜತೆಗೆ ಗಲಭೆ ಪೀಡಿತ ಪ್ರದೇಶದಲ್ಲಿ ಹೈಮಾಸ್ಕ್ ಬೀದಿದೀಪ, ಸಿಸಿಟಿವಿ ಕ್ಯಾಮೆರಾ ಅವಳಡಿಸಲು ಸಹ ಪೊಲೀಸ್ ಇಲಾಖೆ ಮುಂದಾಗಿದೆ. ಗಲಭೆಗೆ ಸಂಬಂಧಿಸಿದಂತೆ ಒಟ್ಟು 27 ಜನರಲ್ಲಿ ಪೊಲೀಸ್ರು ಬಂಧಿಸಿ ಆರು ಪ್ರಕರಣಗಳನ್ನ ದಾಖಲಿಸಿದ್ದಾರೆ.