ಬೆಳಗಾವಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧಾರವಾಡದಲ್ಲಿ ಗಪ್ ಚುಪ್ ಟ್ರೇನಿಂಗ್….!!!

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಿಂದ ಡಜನ್ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸುವ ಮಿಶನ್ ಗೆ ಚಾಲನೆ ನೀಡಿದ್ದು ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ನಾಯಕರಿಗೆ ಧಾರವಾಡದಲ್ಲಿ ಗಪ್ ಚುಪ್ ಟ್ರೇನಿಂಗ್ ಕೊಡುತ್ತಿದ್ದಾರೆ

ಹದಿನೆಂಡು ವಿಧಾನಸಭೆ ಕ್ಷೇತ್ರಗಳಿಂದ ನೂರಕ್ಕೂ ಹೆಚ್ಚು ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿರುವ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ ಮೋಹನ ಅವರು ಧಾರವಾಡದಲ್ಲಿ ಕ್ರೀಯಾಶೀಲ ಕಾರ್ಯಕರ್ತರಿಗೆ ನುರಿತ ಅನುಭವಿ ನಾಯಕರಿಂದ ಟ್ರೇನಿಂಗ್ ಕೊಡುತ್ತಿದ್ದಾರೆ

ರಾಜಕೀಯ ಕಟ್ಟಾ ವಿರೋಧಿಯಾಗಿರುವ ಬಿಜೆಪಿ ಪಕ್ಷಕ್ಕೆ ಸಾಮಾಜಿಕ ಜಾಲತಾಣ ಗಳಲ್ಲಿ ಯಾವ ರೀತಿ ಟಕ್ಕರ್ ಕೊಡಬೇಕು ಭೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಅನ್ನೋದರ ಬಗ್ಗೆ ಕಾಂಗ್ರೆಸ್ ಪಕ್ಷದ ಅನುಭವಿ ನಾಯಕರು ಟ್ರೇನಿಂಗ್ ಕೊಡುತ್ತಿದ್ದಾರೆ

ಒಂದು ವಾರ ನಡೆಯುವ ಟ್ರೇನಿಂಗ್ ನಲ್ಲಿ ಪ್ರತಿ ದಿನ ಬೇರೆ ಬೇರೆ ಕ್ಷೇತ್ರದ ಅನುಭವಿಗಳು ಉಪನ್ಯಾಸ ನೀಡುತ್ತಿದ್ದಾರೆ ಮೊದಲನೇಯ ದಿನ ಕಾಂಗ್ರೆಸ್ ವಕ್ತಾರ ಸುದರ್ಶನ್ ಅವರು ಕ್ರೀಯಾಶೀಲ ಕಾರ್ಯಕರ್ತರ ಕ್ಲಾಸ್ ತೆಗೆದುಕೊಂಡಿದ್ದಾರೆ
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ ಮೋಹನ್ ಅವರು ಕಳೆದ ಆರು ತಿಂಗಳಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಠಿಖಾನಿ ಹೂಡಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ದನೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ

ಕಾಂಗ್ರೆಸ್ ಕ್ರೀಯಾಶೀಲ ಕಾರ್ಯಕರ್ತರಿಗೆ ಧಾರವಾಡದಲ್ಲಿ ಸದ್ದಿಲ್ಲದೇ ತರಬೇತಿ ನೀಡಿ ಚುನಾವಣೆಗೆ ತಯಾರಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸಲು ಎಲ್ಲಿಲ್ಲದ ಕಸರತ್ತು ನಡೆಸಿದೆ

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವಧಿಯವರೆಗೆ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು ಎಂಬುವದರ ಬಗ್ಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಮೂವತ್ತು ನಿಮಿಷದ ಅರ್ಥಪೂರ್ಣ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದ್ದು ಈ ಪ್ರಾತ್ಯಕ್ಷಿಕೆಯನ್ನು ಧಾರವಾಡದಲ್ಲಿ ನಡೆಯುತ್ತಿರುವ ಟ್ರೇನಿಂಗ್ ದಲ್ಲಿ ಕಾರ್ಯಕರ್ತರಿಗೆ ತೋರಿಸಲಾಗುತ್ತದೆ

ಧಾರವಾಡದಲ್ಲಿ ಒಂದು ವಾರದವರೆಗೆ ನೂರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಟ್ರೇನಿಂಗ್ ಕೊಡಲಾಗುತ್ತಿದ್ದು ತರಬೇತಿ ಪಡೆಯುತ್ತಿರುವ ಕಾರ್ಯಕರ್ತರಿಗೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಊಟ ವಸತಿಯ ವ್ಯೆವಸ್ಥೆ ಮಾಡಿಸಿದ್ದಾರೆ
ಟ್ರೇನಿಂಗ್ ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ ಮೋಹನ್ ವಹಿಸಿಕೊಂಡಿದ್ದಾರೆ

ಕಾಂಗ್ರೆಸ್ ಜಿಲ್ಲೆಯಲ್ಲಿ ಒಂದು ಕಡೆ ಸಾಧನಾ ಸಮಾವೇಶ ನಡೆಸುತ್ತಿದ್ದರೆ ಇನ್ನೊಂದು ಕಡೆ ಕಾಂಗ್ರೆಸ್ ಬೆಳಗಾವಿ ಕಾರ್ಯಕರ್ತರಿಗೆ ದೂರದ ಧಾರವಾಡದಲ್ಲಿ ಟ್ರೇನಿಂಗ್ ಕೊಡುತ್ತಿದ್ದು ಈ ಕುರಿತು ಮಾಹಿತಿ ನೀಡಲು ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನಿರಾಕರಿಸಿದ್ದಾರೆ

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.