Breaking News

ರೆಫೆಲ್ ಹಗರಣ ತನಿಖೆಗೆ ಒತ್ತಾಯಿಸಿ ಕೈ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರವು ಮಾಡಿರುವ ರಫೇಲ್ ಹಗರಣದ ತನಿಖೆ ಮಾಡುವಂತೆ ಆಗ್ರಹಿಸಿ ಸೆ. ೨೬ ರಂದು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ಸಿ.ಮೋಹನ ತಿಳಿಸಿದರು.

ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್‌ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಹಗರಣ ದೇಶ ರಕ್ಷಣೆಯ ಭಾವನಾತ್ಮಕ  ವಿಚಾರವಾಗಿದೆ. ರಫೇಲ್ ಹಗರಣದಲ್ಲಿ ₹ ೬೦ ಸಾವಿರ ಕೋಟಿ ಅವ್ಯವಹಾರ ನಡೆದಿದೆಎನ್ನಲಾಗಿತ್ತು. ಆದರೆ,ಈಗ ₹ ೧.೩೦ ಲಕ್ಷ ಕೋಟಿಗೆ ಏರಿದೆ. ಯುದ್ಧ ವಿಮಾನ ಖರೀದಿ ದರವನ್ನು ತಿಳಿಸಬೇಕು. ರಕ್ಷಣಾ ಇಲಾಖೆ ೬ ತುಕುಡಿಗಳನ್ನ ಬಲಪಡಿಸಲು ೧೨೬ ವಿಮಾನ ಖರೀದಿಸಲು ಪ್ರಸ್ತಾಪಿಸಲಾಗಿದ್ದರೂ ಕೇವಲ ೩೬ ವಿಮಾನವನ್ನಷ್ಟೇ ಖರೀದಿಸಿರುವುದು ಏಕೆ ಎಂದು ಪ್ರಶ್ನಿಸಿದರು.  ಉದ್ಯಮಿ ಅನಿಲ ಅಂಬಾನಿ ಅವರ ಕಂಪನಿಯನ್ನು ವಿಮಾನ ಖರೀದಿಗೆ ಆಯ್ಕೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ ಅವರು,ಬಿಜೆಪಿಯವರು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಲೇ ಇದ್ದಾರೆ ಎಂದು ಆರೋಪಿಸಿದರು.

ರಫೇಲ್ ಹಗರಣದಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆದಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಇದರ ಪರಿಣಾಮ ಬೀರಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲಿದೆ. ರಾಜ್ಯದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರ ಮಾರ್ಗದರ್ಶನದಲ್ಲೇ ರಾಜ್ಯದ ಬಿಜೆಪಿ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಹಾಗಾಗಿ, ಕಳೆದ ೧೦ ದಿನಗಳಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆಸಿರುವ ಕುರಿತು ಎಸ್‌ಐಟಿ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಮುಸ್ಲಿಂ ಇಲ್ಲದ ಹಿಂದೂತ್ವ ಅಲ್ಲ ಎಂಬ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ಮೋಹನ್ ಭಾಗವತ್ ಅವರೊಬ್ಬ ನಯವಂಚಕರಾಗಿದ್ದು, ಅವರ ಹೇಳಿಕೆ ಹಿಂದೆ ಓಟಿನ ರಾಜಕೀಯ ಅಡಗಿದೆ. ಗೊಂದಲ ಹೇಳಿಕೆಗಳನ್ನು ನೀಡುತ್ತ ಸಮಾಜದಲ್ಲಿ ಅರಾಜಕತೆ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಮುಸ್ಲಿಮ್‌ರ ಬಗ್ಗೆ ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಮುಸ್ಲಿಮ್‌ರನ್ನು ಆರ್‌ಎಸ್‌ಎಸ್‌ನ ಸಂಚಾಲಕರನ್ನಾಗಿ ನೇಮಕ ಮಾಡಬೇಕು ಎಂದು ಸವಾಲು ಹಾಕಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದ ಅವರು, ಸಮಾಜದಲ್ಲಿ ಗೊಂದಲ ಸೃಷ್ಟಿಸುವುದೇ ಆರ್‌ಎಸಎಸ್ ಅಜೆಂಡಾ ಆಗಿದ್ದು, ಕಳೆದ ೯೩ ವರ್ಷಗಳಿಂದ ಜನತೆಯ ದಾರಿ ತಪ್ಪಿಸುತ್ತಲೇ ಬಂದಿದೆ. ನಿಗೂಢ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ಜೀವವಿರುವ ಶವವಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ನಗರ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ರಾಜು ಸೇಠ್,ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಉಪಸ್ಥಿತರಿದ್ದರ

Check Also

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.