ಬೆಳಗಾವಿ- ಲೋಕಸಭೆ ಚುನಾವಣೆ ಹತ್ತಿರವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಚುರುಕುಗೊಂಡಿದೆ ಬಿಜೆಪಿಯಲ್ಲಿ ಸುರೇಶ್ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸುವ ಪೋಸ್ಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ ಕಾಂಗ್ರೆಸ್ ನಲ್ಲಿ ಸುರೇಶ್ ಅಂಗಡಿಯವರಿಗೆ ಟಕ್ಕರ್ ಕೊಡಲು ಸ್ಟ್ರಾಂಗ್ ಲಿಂಗಾಯತ ಕ್ಯಾಂಡಿಡೇಟ್ ಹುಡುಕಾಟ ನಡೆದಿದೆ
ಸುರೇಶ್ ಅಂಗಡಿ ವರ್ಕರ್ ಅಲ್ಲ ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಡಿ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟಿಕೆಟ್ ಆಕಾಂಕ್ಷಿಗಳು ಪೋಸ್ಟ ಮಾಡಿಸುತ್ತಿದ್ದಾರೆ ಸುರೇಶ ಅಂಗಡಿ ಸರಳ ಸಜ್ಜನ ಬಾರ್ ಬಾರ್ ಅಂಗಡಿ ಸರ್ಕಾರ್ ಎಂದು ಅವರ ಬೆಂಬಲಿಗರು ಹೊಸ ಶ್ಲೋಘನ್ ಶುರು ಮಾಡಿದ್ದಾರೆ
ಕಾಂಗ್ರೆಸ್ ಪಕ್ಷದಲ್ಲಿ ಸುರೇಶ್ ಅಂಗಡಿ ಅವರಿಗೆ ಟಕ್ಕರ್ ಕೊಡಲು ಲಿಂಗಾಯತ ಸಮುದಾಯದ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ತೊಡಗಿದ್ದಾರೆ ಕಾಂಗ್ರೆಸ್ ವೀಕ್ಷಕರು ಬೆಳಗಾವಿಗೆ ಬಂದು ಸಮೀಕ್ಷೆ ನಡೆಸಿದ ಸಂಧರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡುವ ಅಭಿಪ್ರಾಯವನ್ನು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳು ವೀಕ್ಷಕರ ಎದರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ
ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಟಿಕೆಟ್ ಕೊಡಿ ಇಲ್ಲವಾದರೆ ಅವರ ಸಹೋದರ ಚನ್ನರಾಜ ಇಲ್ಲಾ ಅಂದ್ರೆ ಲಕ್ಷ್ಮೀ ಪುತ್ರ ಮೃನಾಲಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ವೀಕ್ಷಕರ ಎದರು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆದರೆ ಕೆಲವರು ಅಶೋಕ ಪಟ್ಟಣ ಇನ್ನೂ ಕೆಲವರು ಶಿವಕಾಂತ ಸಿಧ್ನಾಳ ಅವರ ಹೆಸರು ಶಿಫಾರಸ್ಸು ಮಾಡಿದ್ದಾರೆ ಅಲ್ಪಸಂಖ್ಯಾತರು ಮಹಾಂತೇಶ ಕೌಜಲಗಿ ಅವರ ಹೆಸರು ಶಿಫಾರಸು ಮಾಡಿರುವದು ವಿಶೇಷವಾಗಿದೆ
ಹೆಬ್ಬಾಳಕರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ಆಸಕ್ತಿ ತೋರಿಸುತ್ತಿಲ್ಲ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿವೇಕರಾವ್ ಪಾಟೀಲರಿಗೆ ಟಿಕೆಟ್ ಕೊಡಿಸುವ ಪಟ್ಟು ಸಡಿಲಿಸುತ್ತಿಲ್ಲ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗುಟ್ಟು ಬಹಿರಂಗ ಪಡಿಸುತ್ತಿಲ್ಲ ಹೀಗಾಗಿ ಕಾಂಗ್ರೆಸ್ ಟಿಕೆಟ್ ಇನ್ನುವರೆಗೆ ಕಗ್ಗಂಟಾಗಿಯೇ ಉಳಿದಿದೆ
ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಆದರೆ ನೀವೇ ನಿಲ್ಲಿ ಎಂದು ಕಾಂಗ್ರೆಸ್ ನಾಯಕರು ಲಕ್ಷ್ಮೀ ಹೆಬ್ಬಾಳಕರ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ
ಒಟ್ಡಾರೆ ಕಾಂಗ್ರೆಸ್ ಸ್ಟ್ರಾಂಗ್ ಲಿಂಗಾಯತ ಕ್ಯಾಂಡಿಡೇಟ್ ಹುಡುಕಾಟದಲ್ಲಿ ಸ್ಟ್ರಾಂಗ್ ಕ್ಯಾಂಡಿಡೇಟ್ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದು ಬಿಜೆಪಿಯಲ್ಲಿ ವೋಟ್ ಫಾರ್ ಬಿಜೆಪಿ ನಾಟ್ ಫಾರ್ ಅಂಗಡಿ ಎನ್ನುವ ಶ್ಲೋಘನ್ ಗಳು ಹರಿದಾಡುತ್ತಿವೆ