Breaking News

ಮೋದಿ‌ ಹೆಸರಲ್ಲಿ ಗೆದ್ದಿರುವ ರಾಜ್ಯದ ಎಪಿಂಗಳು ಫೇಸ್ ಲೇಸ್ ಆಗಿದ್ದಾರೆ.

ಬೆಳಗಾವಿ
ಕಾಂಗ್ರೆಸ್ ಸೋತಿರಬಹುದು. ಆದರೆ‌ ನಾವು ನೀಡಿದ ಕಾರ್ಯಕ್ರಮಗಳು ಸೋತಿಲ್ಲ ಎಂದು ಮಾಜಿ ಸಂಸದ ಧ್ರುವನಾರಾಯಣ ತಿಳಿಸಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಒಂದು ಧರ್ಮಕ್ಕೆ ಸಿಮೀತವಾಗಿರುವ ಪಕ್ಷ ಬಿಜೆಪಿ ಇದೆ‌. ಅವರೇ ಇದನ್ನು ಮಾಡುತ್ತಿದ್ದಾರೆ. ಜಾತ್ಯಾತೀತ ಪಕ್ಷ ಅಂದರೆ ಕಾಂಗ್ರೆಸ್, ಸಂಜನಾ ಮತ್ತು ರಾಗಿಣಿ ಬಿಜೆಪಿಯ ಸ್ಟಾರ್ ಕ್ಯಾಪನ್ ಆಗಿದ್ದರೂ ಅವರಿಗೆ ಬಿಜೆಪಿಯವರಿಗೆ ಶೇಮ್ ಆಗಬೇಕು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎಂದು ಆರೋಪಿಸಿದರು.

ನರೇಂದ್ರ ಮೋದಿ ರಾಜ್ಯಕ್ಕೆ ಸಿಗಬೇಕಾದ‌ ಜಿಎಸ್ ಟಿ ಹಣ ಸೇರಿದಂತೆ ಯಾವುದೇ‌ ಅನುದಾನ ಕೇಳಲು ರಾಜ್ಯದ ಎಂಪಿಗಳಿಗೆ ಧೈರ್ಯವಿಲ್ಲ. ರಾಜ್ಯದ ಸಂಸದರಿಗೆ ನಾಚಿಕೆ ಆಗಬೇಕು.  ಮೋದಿ‌ ಹೆಸರಲ್ಲಿ ಗೆದ್ದಿರುವ ರಾಜ್ಯದ ಎಪಿಂಗಳು ಫೇಸ್ ಲೇಸ್ ಆಗಿದ್ದಾರೆ,
ಯಡಿಯೂರಪ್ಪ ಅವರಿಗೆ ರಾಜಾಹುಲಿ ಎನ್ನುತ್ತಾರೆ. ಆದರೆ ಕೇಂದ್ರದ ಮುಂದೆ ರಾಜಾಹುಲಿಯ ಗರ್ಜನೆ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

ಕೆಪಿಸಿಸಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದೇ. 224 ಕ್ಷೇತ್ರಗಳ ಪ್ರತಿ ವಾರ್ಡ್ ನ ಇಬ್ಬರು ಕೊರೊನಾ ವಾರಿಯರ್ಸ್ ಆಯ್ಕೆ ಮಾಡಿದೆ, ಈ ಕಾರ್ಯಕ್ರಮಕ್ಕೆ ೩೨೦ ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಅವರು ಸಹ ಸಹಕಾರ ನೀಡುತ್ತಿದ್ದಾರೆ, ರಾಜ್ಯದಲ್ಲಿ 9 ಸಾವಿರ ಪಾಜಿಟಿವ್ ಕೇಸ್ ಒಂದೇ ದಿನ ಆಗಿದೆ. ಸಮುದಾಯ ಚೈನ್ ಕಟ್ಟ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಜವಾಬ್ದಾರಿ ಸರಕಾರದಾಗಿದೆ. ಆದರೆ, ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ‌. ಆರಂಭದಲ್ಲಿ ತಡೆಹಿಡಿಯಬಹದಿತ್ತು. ಆದರೆ ಕೇಂದ್ರ ಸರಕಾರ ಕೂಡ ವಿಫಲವಾಗಿದೆ. 15 ದಿನ ಇದೇ ಮುಂದುವರಿದರೆ ಮೊದಲ ಸ್ಥಾನದಲ್ಲಿ ಬರುತ್ತದೆ ಎಂದು ದ್ರುವನಾರಾಯಣ ಕಳವಳ ವ್ಯೆಕ್ತಪಡಿಸಿದರು.

೩೩ ಸಾವಿರ ಕೋಟಿ ರೂಪಾಯಿ ಸಾಲ ಮಾಡಲು ಪ್ರಯತ್ನಿಸುತ್ತಿದ್ದಾರೆ.62402 ರೂ ಪ್ರತಿಯೊಬ್ಬರ ಮೇಲೆ ಇದೆ. ಸರಿಯಾದ ಜಿಎಸ್ ಟಿ ವಿತರಣೆ ಆಗುತ್ತಿಲ್ಲ.
ಸಾಲ ತೆಗೆದುಕೊಳ್ಳಲು ೨೫ ಸಂಸದರು ಇದ್ದಾರೆ. ಎಲ್ಲರೂ ಅನ್ಯಾಯ ಸರಿಪಡಿಸಲು ಆಗುತ್ತಿಲ್ಲ. ರಾಜ್ಯದ ಬಿಜೆಪಿ ಸಂಸದರಿಗೆ ಶೇಮ್, ಎಲ್ಲರಿಗೂ ನಾಚಿಕೆ ಆಗಬೇಕು. ಧೈರ್ಯ ದಿಂದ ಮಾತನಾಡಲು ಆಗುತ್ತಿಲ್ಲ,ರಾಜ್ಯಸಭಾ ಸದಸ್ಯರಾಗಿರುವ ಸೀತಾರಾಮ ಅವರಿಗೆ ಮುಂದುವರಿಯಲು ನೈತಿಕತೆಯಿಲ್ಲ. ಜಿಡಿಪಿ ಕೆಳಮಟ್ಟಕ್ಕೆ ಹೋಗಿದೆ.ಬಡವರಿಗೆ ಯಾವೂದೆ ಕಾರ್ಯಕ್ರಮ ಕೊಡಲಿಲ್ಲ. ನಾವು ನೀಡಿದ ಕಾರ್ಯಕ್ರಮಗಳು ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಹಸಿವು ನೀಗಿದೆ ಎಂದರು

ಕಿಟ್ ಸೇರಿದಂತಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಾಸೋಹದ‌ ಕಾರ್ಯಕ್ರಮ ನೀಡಿದ್ದೇವೆ.ಸಂಕಷ್ಟದ‌ ಸಮಯದಲ್ಲಿ ಭ್ರಷ್ಟಾಚಾರ ಮಾಡಿರುವುದಕ್ಕೆ ನಾವು ಅಸಹಕಾರ ಮಾಡಿದ್ದೇವೆ.
ಎರಡು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ‌. ಅದಕ್ಕೆ ನಾವು ಅಸಹಕಾರ ಮಾಡಿದ್ದೇವೆ.

ಏಳು ವರ್ಷ ಕಳೆದರೂ ಒಳ್ಳೆಯ ಸರಕಾರದ ಮಾನದಂಡವಿಲ್ಲದೇ ಸಾಧನೆ ಶೂನ್ಯವಾಗಿದೆ.
ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದೀರಿ. ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ,ರೈಲ್ವೆ ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಆರೋಗ್ಯ ಹಸ್ತದ ಕಿಟ್ ನ ಬೆಲೆ
4000 ವರೆಗೆ ಬೆಲೆ ಕಿಟ್ ನೀಡಲಾಗುತ್ತಿದೆ. ಐದಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಕ್ರಮ ನಡೆಯಲಿದೆ, ಒಂದನೇ ಸ್ಥಾನಕ್ಕೆ ಒಂದರೆ ಪುನಃ ಚಪ್ಪಾಳೆ ತಟ್ಟಬೇಕಾಗತ್ತದೆ,ದ್ರುವ ನಾರಾಯಣ ಲೇವಡಿ ಮಾಡಿದರು.

ಸದಾನಂದ ಡಂಗಣ್ಣನವರ, ರಾಜು ಸೇಠ್, ವಿನಯ ನಾವಲಗಟ್ಟಿ ಮತ್ತಿತರರು ಇದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *