Breaking News

ಬೆಳಗಾವಿ, ಕಾಂಗ್ರೆಸ್ ಕಚೇರಿಯಲ್ಲಿ ಫುಲ್ ಗರ್ದಿ….!!!

ಬೆಳಗಾವಿ-ಬಾಡಿಗೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಕಂಟ್ರೋಲ್ ಮಾಡ್ತಾ ಇದ್ರು,ಅದು ಅವರ ಕಚೇರಿಯಂತಾ,ಕಾರ್ಯಕರ್ತರು ಹಿಂದೆ,ಮುಂದೆ ನೋಡ್ತಾ ಇದ್ರು.ಆದ್ರೆ ಈಗ ಕಾಲ ಬದಲಾಗಿದೆ.ಕಾಂಗ್ರೆಸ್ ಕಚೇರಿಗೆ ಪಕ್ಷದ ಸ್ವಂತ ಕಟ್ಟಡವಿದ್ದು,ಕಾಂಗ್ರೆಸ್ ಚಟುವಟಿಕೆಗಳು ಚುರುಕು ಗೊಂಡಿವೆ.

ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗುತ್ತಿದ್ದಂತೆಯೇ ಅರ್ದಮರ್ದ ವಾಗಿದ್ದ ಬೆಳಗಾವಿ ಕಾಂಗ್ರೆಸ್ ಭವನದ ಕಟ್ಟಡ ಕಾಮಗಾರಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪೂರ್ಣಗೊಳಿಸಿದರು.ಜೊತೆಗೆ ಈ ಕಟ್ಟಡಕ್ಕೆ ಹೊಸ ಲುಕ್ ಕೊಡುವದರ ಜೊತೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ವ್ಯೆವಸ್ಥೆ ಮಾಡಿದರು.

ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಕಾಂಗ್ರೆಸ್ ಭವನದಲ್ಲಿ ದಿನನಿತ್ಯ ಪಕ್ಷದ ಸಂಘಟನಾತ್ಮಕ ಕಾರ್ಯಕ್ರಮಗಳು ನಡೆಯುತ್ತವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಕಚೇರಿಗೆ ಬರ್ತಾರೆ ಎನ್ನುವ ಸುದ್ಧಿ ತಿಳಿದರೆ ಸಾಕು,ಈ ಕಚೇರಿಗೆ ಸಾವಿರಾರು ಜನ ಕಾರ್ಯಕರ್ತರು ಅಲ್ಲಿ ಸೇರ್ತಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಬ್ ಕ್ರಿಯೇಟ್ ಮಾಡಿದ್ದು ಅವರೊಬ್ಬ ಪಾವರ್ ಫುಲ್ ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ.

ಹೆಲಿಕಾಪ್ಟರ್ ಮೂಲಕ,ದೂರ,ದೂರ ನಡೆಯುವ ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ,ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿರಂತರ ಪ್ರಯತ್ನ ನಡೆಸಿದ್ದಾರೆ…

ಅವರ ಅಭಿಮಾನಿಗಳು ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎಂದು ಬಿಂಬಿಸುತ್ತಿದ್ದು,ಸತೀಶ್ ಅವರ ನಡೆ ಸಿಎಂ ಖುರ್ಚಿ ಕಡೆ ಎನ್ನುವಂತಾಗಿದೆ. ಆದ್ರೆ ಸತೀಶ್ ಅವರು,ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವದು ನನ್ನ ದೃಡ ಸಂಕಲ್ಪ,ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಯಾರು..? ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತದೆ.ಅಂತಾರೆ ಸತೀಶ್ ಜಾರಕಿಹೊಳಿ.

ಕಾಂಗ್ರೆಸ್ ಪಕ್ಷವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ, ಸತೀಶ್ ಜಾರಕಿಹೊಳಿ ಅವರು ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.ಘಟಪ್ರಭಾದಲ್ಲಿರುವ ಸೇವಾದಳದ ಕಟ್ಟಡದಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಇಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ಡ ಪಾರ್ಟಿ ಮಾಡುವ ಕನಸು ಸತೀಶ್ ಜಾರಕಿಹೊಳಿ ಅವರದ್ದಾಗಿದೆ..

ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಕಟ್ಟಡಗಳಿಗೆ ಕೋಟಿ, ಕೋಟಿ, ಖರ್ಚು ಮಾಡಿ,ಬೆಳಗಾವಿ ಜಿಕ್ಲೆಯಲ್ಲಿ ಅಷ್ಟೇ ಅಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಟೆಯನ್ನು ಭದ್ರಗೊಳಿಸುವ ಪ್ರಯತ್ನ ಮುಂದುವರೆಸಿದ್ದಾರೆ..

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *